ಮಾ.11-12 ರಂದು ನೂಜಾಡಿ ಬಿಲ್ಲವ ಕೋಟ್ಯಾನ್ ಬರಿ ಕುಟುಂಬದ ನೇಮೋತ್ಸವ

0

ಎಡಮಂಗಲ ಗ್ರಾಮದ ನೂಜಾಡಿ ಬಿಲ್ಲವ ಕೋಟ್ಯಾನ್ ಬರಿ ಕುಟುಂಬದ ಶ್ರೀ ರಕ್ತೇಶ್ವರಿ ಮತ್ತು ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಮಾ.11 ಮತ್ತು12 ರಂದು ನಡೆಯಲಿದೆ.


ಮಾ.11 ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನಾ, ಪ್ರಾರ್ಥನೆ, ಗಣಪತಿಹೋಮ, ನಾಗದೇವರಿಗೆ ತಂಬಿಲ, ದೈವಗಳಿಗೆ ಶುದ್ಧಿ ತಂಬಿಲ, ವೆಂಕಟ್ರಮಣ ದೇವರ ಮುಡಿಪು ಪೂಜೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ ದೈವಗಳ ಭಂಡಾರ ತೆಗೆದು, ನಂತರ ರಕ್ತೇಶ್ವರಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಪಂಜುರ್ಲಿ ದೈವಗಳ ನೇಮ, ಮಾ.12 ಕ್ಕೆ ಧರ್ಮದೈವ ಹಾಗೂ ಗುಳಿಗ ದೈವಗಳ ನೇಮ ನಡೆಯಲಿದೆ.