ಶ್ರೀಮದ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ ಅಂಗಸಂಸ್ಥೆಯಾ್ ಅರಂಬೂರಿನ ಧರ್ಮಾರಣ್ಯ ದಲ್ಲಿ ವಾರ್ಷಿಕ ಮಹೋತ್ಸವ ವವು ಮಾ. 9 ರಂದು ಜರುಗಿತು.
ಗುರು ಗಣಪತಿಯ ಸಾನ್ನಿಧ್ಯದಲ್ಲಿ ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ, ಪೂರ್ವಕ ನವಗ್ರಹ ಹೋಮ , ನವಗ್ರಹ ವೃಕ್ಷ ಆರಾಧನೆ , ಗಣಪತಿ ಪಂಚಾಯತನ ಪೂಜೆ ಹಾಗೂ ಸತ್ಯ ಗಣಪತಿ ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಯಿತು. ವೇ.ಮೂ. ಪುರೋಹಿತ ನಾಗರಾಜ ಭಟ್ ಮತ್ತು ಬಳಗ ಹಾಗೂ ಅರಂಬೂರಿನ ಭಾರದ್ವಾಜ ಆಶ್ರಮದ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ವೈದಿಕ ಕಾರ್ಯಕ್ರಮದಲ್ಲಿ ಸಹಕರಿಸಿದರು.








ಧರ್ಮಾರಣ್ಯದ ಅಧ್ಯಕ್ಷ ಕುಮಾರಸ್ವಾಮಿ ತೆಕ್ಕುಂಜ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾಗಿರುವ ಡಾ. ಶಂಕರ ಭಟ್ ನೀರಬಿದಿರೆ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಗಳನ್ನು ಸನ್ಮಾನ ಪತ್ರ , ಶಾಲು , ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.
ಧರ್ಮಾರಣ್ಯ
ಅಭಿವೃದ್ಧಿ ಸಮಿತಿ ಸಂಚಾಲಕ ಗೋಪಾಲಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡಿದರು.
ಗತ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಕು. ಯಶಸ್ವಿ ಪಿ. ಭಟ್ ರವರನ್ನು ಪುರಸ್ಕರಿಸಲಾಯಿತು.
ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯಾಯಿತು.
ಬಳಿಕ ಕು.ವೈಷ್ಣವಿ , ಮಹಿಮಾ ,ಸಿಂಚನಾ ಅನುಷಾ ಹಾಗೂ ಅನುಶ್ರೀ ಯವರು ನೃತ್ಯ ಪ್ರದರ್ಶನ ನೀಡಿದರು.
ಕೀ ಬೋರ್ಡ್ ನಲ್ಲಿ
ಅಪ್ರಮೇಯ ಸಹಕರಿಸಿದರು.
ಹರಿಕೃಷ್ಣ ಯೋಗ ಪ್ರದರ್ಶನ ನೀಡಿದರು.
ಅಭಯ ಶ್ಯಾಮ ಭಗವದ್ಗೀತೆ ಪಠಣ ನಡೆಸಿಕೊಟ್ಟರು. ವಿಜಯಕೃಷ್ಣ ಕಬ್ಬಿನಹಿತ್ಲು , ಶ್ರೀಮತಿ ಸಂಧ್ಯಾ ಈಶ್ವರ ಕುಮಾರ್, ಡಾ. ವಿದ್ಯಾ ಶಾರದಾ ಕಾರ್ಯಕ್ರಮ ನಿರ್ವಹಿಸಿದರು.










