ಲ್ಯಾಂಪ್ ಸೊಸೈಟಿ ಸಾರಥ್ಯ ಹಿಡಿದ ಬಿಜೆಪಿ

0

ಅಧ್ಯಕ್ಷರಾಗಿ ನೀಲಮ್ಮ ಕಣಿಪ್ಪಿಲ, ಉಪಾಧ್ಯಕ್ಷರಾಗಿ ಪುಂಡರೀಕ ಕಾಪುಮಲೆ

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ವಿವಿದೋದ್ಧೇಶ ಸಹಕಾರಿ ಸಂಘ ಲ್ಯಾಂಪ್ಸ್ ಇದರ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಆಯ್ಕೆಯಾದ ಬಳಿಕ ಬಿಜೆಪಿ ನಾಯಕರು ಅಭಿನಂದನಾ ಸಭೆಯನ್ನು ಲ್ಯಾಂಪ್ ಸಭಾಂಗಣದಲ್ಲಿ ನಡೆಸಿದರು. ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಲ್ಯಾಂಪ್ ಮಾಜಿ ಅಧ್ಯಕ್ಷ ದಾಮೋದರ ಮಂಚಿ, ನಗರಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನಿಕಟಪೂರ್ವ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮಹಾಮಂಡಲದ ನಿರ್ದೇಶಕ ಮಂಜುನಾಥ್ ವಿಜೇತರಿಗೆ ಶುಭ ಹಾರೈಸಿದರು.

ನೂತನ ನಿರ್ದೇಶಕರಾದ ಹರ್ಷಿತ್ ಡಿ, ಅರಂತೋಡು,
ಜಸ್ಮಿತಾ ಎಡಮಂಗಲ, ಐತ್ತಪ್ಪ ಎನ್, ಮಿಥುನ್ ನಾಯ್ಕ್ ಕೆ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ನಾಯಕರುಗಳಾದ ಶ್ರೀಪತಿ ಭಟ್ ಮಜಿಗುಂಡಿ, ಎ.ಟಿ. ಬಿಜೆಪಿ ನಗರ ಅಧ್ಯಕ್ಷ ಕುಸುಮಾಧರ, ಪಿ.ಕೆ. ಉಮೇಶ್, ಸುಬೋಧ್ ಶೆಟ್ಟಿ ಮೇನಾಲ ಸೇರಿದಂತೆ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಗರಪಂಚಾಯತ್ ಉಪಾಧ್ಯಕ್ಷ ಜಿ.ಬಿ. ನಾಯ್ಕ್ ಶುಭ ಹಾರೈಸಿ, ವಂದಿಸಿದರು.