ಶ್ರೀಮತಿ ವನಿತಾ ಸಚಿತ್ ಕಲ್ಮಡ್ಕರಿಗೆ ಬಾಗಲಕೋಟೆಯಲ್ಲಿ ಗೌರವ ಸನ್ಮಾನ

0

ಬಾಗಲಕೋಟೆಯ ಕಮಟಗಿಯ ವೈ ಆರ್ ಪಾಟೀಲ್ ಗ್ರಾಮೀಣ ಮಹಾವಿದ್ಯಾಲಯದಲ್ಲಿ ಮಾರ್ಚ್ 8 ರಂದು ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕಬಡ್ಡಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ನಿರಂತರವಾಗಿ 9 ವರುಷ ಪ್ರತಿನಿಧಿಸಿ, 2013 ರ ಕರ್ನಾಟಕ ರಾಜ್ಯ ಒಲಂಪಿಕ್ ಪ್ರಶಸ್ತಿ ಪಡೆದಿರುವ ಪ್ರಸ್ತುತ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರಲ್ಲಿ ರಾಜ್ಯ ಮಟ್ಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶ್ರೀ ಮತಿ ವನಿತಾ ಸಚಿತ್ ಕಲ್ಮಡ್ಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ MHRD ಪದವಿ ಹಾಗೂ ಧಾರವಾಡ ವಿಶ್ವ ವಿದ್ಯಾನಿಲಯದಲ್ಲಿ BPEd ಪದವಿ ಪಡೆದಿರುವ ಇವರು ಪ್ರಸ್ತುತ ಪ್ರಗತಿ ಎಜುಕೇಷನ್ ಟ್ರಸ್ಟ್ ಕಾಣಿಯೂರು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.