ಪವಿತ್ರ ರಂಝಾನ್ ತಿಂಗಳ 29 ದಿವಸಗಳ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತರ್ ದಿನವನ್ನು ಮಾ.31 ರಂದು ಸಂಭ್ರಮದಿಂದ ಆಚರಿಸಿದರು.
ಮಸೀದಿಯ ಮುಖ್ಯಗುರುಗಳಾದ ಬಹು|ನಸೀಹ್ ದಾರಿಮಿ ಯವರು ಈದ್ ನಮಾಝ್ ಗೆ ನೇತೃತ್ವ ನೀಡಿ, ಒಂದು ತಿಂಗಳಿನಿಂದ ಉಪವಾಸ ವೃತ ಆಚರಿಸಿ, ವಿಶೇಷ ನಮಾಝ್, ಪ್ರಭಾಷಣಗಳು, ಕುರಾನ್ ಪಾರಾಯಣ, ದಾನ ದರ್ಮ ಸೇರಿದಂತೆ ಹಲವಾರು ಪುಣ್ಯ ಕಾರ್ಯಗಳನ್ನು ಮಾಡಿ, ಹಬ್ಬದ ಹೆಸರಿನಲ್ಲಿ ಅದೆಲ್ಲವನ್ನು ಕಳೆಯುವಂತಾಗಬಾರದು ನಮ್ಮ ಹಬ್ಬಗಳು, ಇಸ್ಲಾಮಿ ಚೌಕಟ್ಟಿನೊಳಗೆ, ಎಲ್ಲಾ ಸಹೋದರ ದರ್ಮಗಳೊಂದಿಗೆ ಸೌಹಾರ್ದಯುತ ಮನೋಭಾವದೊಂದಿಗೆ ಮುಂದುವರಿಯಬೇಕೆಂದು ಈದ್ ಸಂದೇಶ ನೀಡಿದರು. ಹಬ್ಬದ ಸಂಭ್ರಮದಲ್ಲಿ ವಾಹಗಳಲ್ಲಿ ಸಂಚರಿಸುವವರು ಅತ್ಯಂತ ಸಂಯಮದಿಂದ ಹೋಗಬೇಕಾಗಿಯೂ ಅವರು ಕಿವಿಮಾತು ಹೇಳಿದರು.
ಜಮಾಅತ್ ಅಧ್ಯಕ್ಷರಾದ ಜ| ಯು. ಹೆಚ್. ಅಬೂಬಕ್ಕರ್, ಉಪಾದ್ಯಕ್ಷರಾದ ಜ| ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಜ| ನಾಸಿರ್ ಬಾಯಿ, ಪ್ರಧಾನ ಕಾರ್ಯದರ್ಶಿ ಜ| ಬಷೀರ್ ಕಲ್ಲಪಣೆ, ಜೊತೆ ಕಾರ್ಯದರ್ಶಿ ಜ | ಅಜರುದ್ದೀನ್ ಬೆಳ್ಳಾರೆ ಸೇರಿದಂತೆ ಇತರ ಸಮಿತಿ ಸದಸ್ಯರು, ಸಮುದಾಯ ಮುಖಂಡರು, ಜಮಾಅತರು, ಮಕ್ಕಳು ಸಹಿತ ಊರಿನ ನೂರಾರು ಜನರು ಸಂಭ್ರಮದಿಂದ ಈದ್ ಆಚರಣೆಯಲ್ಲಿ ಪಾಲ್ಗೊಂಡರು.