ಕುಂಬರ್ಚೊಡು: ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.
ಮಸೀದಿಯ ಖತಿಬರಾದ
ಅಶ್ರಫ್ ಮುಸ್ಲಿಯಾರ್ ರವರು ಖುತುಬಾ ನೆರವೇರಿಸಿ ಈದ್ ಸಂದೇಶವನ್ನು ನೀಡಿ ‘ಹಬ್ಬ ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ
ಇಹ ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.









ಸುಮಾರು ಎಂಟು ವರ್ಷಗಳಿಂದ ಮಸೀದಿಯ ಖತಿಬರಾಗಿ ಸೇವೆಗೈದ ಆಶ್ರಫ್ ಮುಸ್ಲಿಯಾರ್ ರವರನ್ನು ಜಮಾಅತ್ ವತಿಯಿಂದ
ಬೀಳ್ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿಯ ಮುಅಲ್ಲಿಮ್ ರಹೂಫ್ ಆಝ್ಹರಿ,
ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ,ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ,
ಹನೀಫ್ ಹಾಜಿ ಕೆ ಎಂ,
ಮಹಮ್ಮದ್ ಮುಸ್ಲಿಯಾರ್ ಎಲಿಮಲೆ, ಸಿದ್ದಿಕ್ ಹುದವಿ ಮಾಡನ್ನೂರ್,
ಹಾಗೂ ಆಡಳಿತ ಸಮಿತಿಯ ಸದಸ್ಯರು ಮತ್ತು ಜಮಾಅತಿನ ಸರ್ವರೂ ಪಾಲ್ಗೊಂಡರು.










