
ಜಾಲ್ಸುರಿನ ಕದಿಕಡ್ಕ ಶಾಲೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾ.31ರಂದು ಸೇವಾ ನಿವೃತ್ತಿ ಹೊಂದಿದ ಶಾಲೆಯ ಸಹಶಿಕ್ಷಕಿ ಶ್ರೀಮತಿ ದೇವಕಿಯವರಿಗೆ ಬೇಡ್ಕೊಡುಗೆ ಸಮಾರಂಭ ಎ. 8 ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧ ನಿವೃತ್ತ ಶಿಕ್ಷಕಿ ದೇವಕಿಯವರನ್ನು ಫಲಪುಷ್ಪ, ಶಾಲು, ಪೇಟ, ಹಾರ ಹಾಕಿ ಗೌರವಿಸಿದರು.















ವೇದಿಕೆಯಲ್ಲಿ ಜಾಲ್ಸುರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ
ಆರ್ಭಡ್ಕ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಸುಜಾತ, ನಿವೃತ್ತ ಶಿಕ್ಷಕಿ ದೇವಕಿಯರ ಪತಿ ಶಿವರಾಮ ಗೌಡ ಬೆಳ್ಳಿಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಂ ಬಾಬು, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ವಾರಿಜಾ, ಶಾಲೆಯ ಹಿರಿಯ ವಿದ್ಯಾರ್ಥಿ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನುಷಾ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕಿ ದೇವಕಿಯವರನ್ನು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ನಿವೃತ್ತ ಮುಖ್ಯ ಶಿಕ್ಷಕಿ ವಾರಿಜ ಬಿ ಇವರು ಶಾಲು ಹೊದಿಸಿ ಸನ್ಮಾನಿಸಿದರು. ಶಾಲಾ ಮಕ್ಕಳು ಮತ್ತು ಪೋಷಕರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭ ಶ್ರೀಮತಿ ದೇವಕಿಯವರು ಶಾಲೆಗೆ ಬಟ್ಟಲ್ ಸ್ಟಾಂಡ್ ಕೊಡುಗೆಯಾಗಿ ನೀಡಿದರು.

ಶಿಕ್ಷಕರಾದ ಸುಪ್ರೀತ್ ಯಂ ಎಸ್,, ರಾಘವೇಂದ್ರ ಯಂ
ಕಾರ್ಯಕ್ರಮ ನಿರ್ವಹಿಸಿದರು.










