ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅರಂತೋಡು ನೆಹರೂ ಸ್ಮಾರಕ ಪ.ಪೂ.ಕಾಲೇಜು ಶೇ 94.5 ಫಲಿತಾಂಶ ದಾಖಲಿಸಿದೆ.
ಕಲಾ ವಿಭಾಗದಲ್ಲಿ 24 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 4 ಮಂದಿ ಡಿಸ್ಟಿಂಕ್ಷನ್, 13 ಮಂದಿ ಪ್ರಥಮ ಶ್ರೇಣಿ, 5 ಮಂದಿ ದ್ವಿತೀಯ ಶ್ರೇಣಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ 95.8 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 55 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 7 ಮಂದಿ ಡಿಸ್ಟಿಂಕ್ಷನ್, 40 ಮಂದಿ ಪ್ರಥಮ ಶ್ರೇಣಿ, 3ಮಂದಿ ದ್ವಿತೀಯ ಶ್ರೇಣಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ 92.7ಫಲಿತಾಂಶ ಬಂದಿದೆ.








ವಾಣಿಜ್ಯ (HEBA) ವಿಭಾಗದಲ್ಲಿ 17 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಒಂದು ಡಿಸ್ಟಿಂಕ್ಷನ್, 7ಮಂದಿ ಪ್ರಥಮ ಶ್ರೇಣಿ, 7ಮಂದಿ ದ್ವಿತೀಯ ಶ್ರೇಣಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ 94.1ಫಲಿತಾಂಶ ಬಂದಿದೆ.
ವಾಣಿಜ್ಯ( EBAC) ವಿಭಾಗದಲ್ಲಿ 44 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 5 ಮಂದಿ ಡಿಸ್ಟಿಂಕ್ಷನ್, 31ಮಂದಿ ಪ್ರಥಮ ಶ್ರೇಣಿ, 5 ಮಂದಿ ದ್ವಿತೀಯ ಶ್ರೇಣಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ 95.4 ಫಲಿತಾಂಶ ಬಂದಿದೆ.
ಕಾಲೇಜಿಗೆ ಒಟ್ಟಾರೆಯಾಗಿ 94.5 ಫಲಿತಾಂಶ ಬಂದಿದೆ.










