








ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಶೆಟ್ಟಿಯವರ ಪುತ್ರಿ, ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ 594 ಅಂಕಗಳೊಂದಿಗೆ ರಾಜ್ಯಕ್ಕೆ 6 ನೇ ಸ್ಥಾನಿಯಾಗಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ 94 ಅಂಕ ಪಡೆದಿರುವ ವೈಷ್ಣವಿಯವರು ಉಳಿದ ಎಲ್ಲ ವಿಷಯದಲ್ಲಿ 100 ಅಂಕವನ್ನು ಗಳಿಸಿದ್ದಾರೆ.










