ಗುರುಂಪು: ಜೆಜೆಎಂ ಕಾಮಗಾರಿ ಸಂದರ್ಭದಲ್ಲಿ ಅಗೆದ ಕಾಂಕ್ರೀಟ್ ರಸ್ತೆಗೆ ಮರು ಕಾಂಕ್ರೀಟಿಕರಣ

0

ಆಲೆಟ್ಟಿ ರಸ್ತೆಯ ಗುರುಂಪುವಿನಿಂದ ಕಲ್ಲುಮುಟ್ಲು ಪಂಪ್ ಹೌಸ್ ತನಕ ಜೆಜೆಎಂ ಕಾಮಗಾರಿ ಕೆಲಸ ನಡೆಸುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಪೈಪು‌ಲೈನ್ ಅಳವಡಿಸಲಾಗಿತ್ತು.

ಇದರಿಂದಾಗಿ ಈ ರಸ್ತೆಯ ಲ್ಲಿ ಮಳೆ ಬಂದಾಗಲೆಲ್ಲಾ ನೀರು ಹರಿದು ಕೆಸರುಮಯವಾಗಿ ವಾಹನ ಸಂಚಾರಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿತ್ತು. ಆಗಾಗ ವಾಹನಗಳು ಮತ್ತೊಂದು ವಾಹನಕ್ಕೆ ಸೈಡ್ ಕೊಡುವ ವೇಳೆ ಹೂತು ಹೋಗಿ ಪ್ರಕರಣಗಳು ನಡೆದಿತ್ತು. ಈ ಬಗ್ಗೆ ವರದಿಗಳು ಮಾದ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಸಾರ್ವಜನಿಕರ ಆಗ್ರಹದ ಮೇರೆಗೆ ಮತ್ತೆ ಅಗೆದು ತೆಗೆದ ಕಾಂಕ್ರೀಟ್ ರಸ್ತೆಗೆ ಮರು ಕಾಂಕ್ರೀಟಿಕರಣದ ಕೆಲಸ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.