








ಅಕ್ಷಯ ಕಾಲೇಜು ಪುತ್ತೂರು ಇಲ್ಲಿ ಎ-೮ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪದವಿ ಉತ್ಸವ ಕಾರ್‍ಯಕ್ರಮದಲ್ಲಿ ಭಾಗವಹಿಸಿದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಸಮಗ್ರ ಅಂಕಗಳನ್ನು ಪಡೆದು ಪ್ರೇಮಜಾ ನಾರಾಯಣ್ ಮೆಮೋರಿಯಲ್ ಓವರ್ ಆಲ್ ಚಾಂಪಿಯನ್‌ಶಿಪ್ ರೋಲಿಂಗ್ ಟ್ರೋಪಿಯನ್ನು ತನ್ನದಾಗಿಸಿತು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಒಟ್ಟು ೧೮ ತಂಡಗಳು ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. ವಿವಿಧ ಸ್ಫರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು. ರಸಪ್ರಶ್ನೆ ಸ್ಫರ್ಧೆಯಲ್ಲಿ ಅಕ್ಷಯ್ ಬಿ.ಆರ್ ತೃತೀಯ ಬಿ.ಎ ಹಾಗೂ ತಿಲಕೇಶ್ ಕೆ.ಆರ್ ಅಂತಿಮ ಬಿ.ಕಾಂ ಪ್ರಥಮ ಸ್ಥಾನ, ನೃತ್ಯ ಸ್ಫರ್ಧೆಯಲ್ಲಿ ಸಿಂಚನ ಬಿ.ಆರ್ ಮತ್ತು ತಂಡ ಪ್ರಥಮ ಸ್ಥಾನ, ಪ್ಯಾಶನ್ ಶೋ ಸ್ಫರ್ಧೆಯಲ್ಲಿ ಕಾರ್ತಿಕ್ ಕುಮಾರ್ ಪ್ರಥಮ ಬಿ.ಎಸ್ಸಿ ಪ್ರಥಮ ಸ್ಥಾನ, ಗೇಮಿಂಗ್ ಸ್ಫರ್ಧೆಯಲ್ಲಿ ಪ್ರೀತೇಶ್ ಎ ವಿ ಅಂತಿಮ ಬಿ.ಕಾಂ ಹಾಗೂ ವಿಕೇತ್ ಕೆ ಬಿ ಅಂತಿಮ ಬಿ.ಕಾಂ ದ್ವಿತೀಯ ಸ್ಥಾನ, ಮಾರ್ಕೆಟಿಂಗ್ ವಿಭಾಗದಲ್ಲಿ ಮನೀಶ್ ರೈ ಅಂತಿಮ ಬಿ.ಕಾಂ ಮುಹಮ್ಮದ್ ಇರ್ಫಾನ್ ಅಂತಿಮ ಬಿ.ಕಾಂ ದ್ವಿತೀಯ ಸ್ಥಾನ ಪಡೆದುಕೊಂಡರು. ಅಂತಿಮವಾಗಿ ಸಮಗ್ರ ಅಂಕಗಳನ್ನು ಪಡೆದು ಓವರ್ ಆಲ್ ಚಾಂಪಿಯನ್‌ಶಿಪ್ ರೋಲಿಂಗ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪುಷ್ಪರಾಜ್ ಕೆ ಹಾಗೂ ಉಪನ್ಯಾಸಕ ವೃಂದದವರು ಮಾರ್ಗದರ್ಶನ ಮಾಡಿದ್ದರು.










