ಪಂಜದಲ್ಲಿ ಕಬಡ್ಡಿ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ

0


ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌ. ಶಾ.ವಿ.) ಪಂಜ , ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸುಳ್ಯ ದ.ಕ , ಲಯನ್ಸ್ ಕ್ಲಬ್ ಪಂಜ‌ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.)ಪಂಜ ಇದರ ಸಂಯುಕ್ತ ಆಶ್ರಯದಲ್ಲಿ 7 ರಿಂದ 10 ನೇ ತರಗತಿ ವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಎ 10 ರಿಂದ ಎ19 ರವರೆಗೆ ಪಂಜ ಸ.ಪ.ಪೂ.‌ಕಾ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ .

ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಸ.ಪ.ಪೂ.ಕಾ ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ ವಹಿಸಿದ್ದರು.

ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಉದ್ಘಾಟಿಸಿದರು. ಅತಿಥಿಗಳಾಗಿ ಸುಳ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಾಧವ ಬಿ. ಕೆ , ಉಪವಯಾರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ವೈದ್ಯರಾದ ಡಾ. ಪ್ರಕಾಶ್ ಡಿ’ಸೋಜ , ಭಾರತೀಯ ಭೂ ಸೇನೆ ನಿವೃತ್ತ ಯೋಧ ಪದ್ಮನಾಭ ಬೊಳ್ಳಾಜೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ,

ಚಿನ್ನಪ್ಪ ಕಾಣಿಕೆ, ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಮುಖ್ಯೋಪಾಧ್ಯಾಯರಾದ ದೇವಿಪ್ರಸಾದ್ , ಕಬಡ್ಡಿ ತರಬೇತುದಾರರು ಜಸ್ವಂತ್ ಎಸ್, ಮೂರ್ತಿ ಜಿ, ಸಹ ತರಬೇತುದಾರರಾದ ಸಂದೀಪ್ ರೈ ಪಲ್ಲೋಡಿ, ಉಮೇಶ್ ಪಂಜದಬೈಲು, ಶಿಬಿರದ ಸಂಯೋಜಕರಾದ ಪದ್ಮನಾಭ ಏನೆಕಲ್ಲು, ರಾಮಚಂದ್ರ ಪಿ.ಎನ್,‌ಶಿಬಿರದ ಸಂಚಾಲಕರಾದ ಯೋಗೀಶ್ ಸಿ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ಪವನ್ ಪಲ್ಲತ್ತಡ್ಕ , ಪಂಚಶ್ರಿ ಪಂಜ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಶಶಿ ದಾಸ್ ನಾಗತೀರ್ಥ ಹಾಗೂ ಕ್ಲಬ್ ನ ಸದಸ್ಯರು ಮತ್ತು ಲಯನ್ಸ್ ಕ್ಲಬ್ ಪಂಜ‌ ಕಾರ್ಯದರ್ಶಿ ಸುರೇಶ ನಡ್ಕ ಹಾಗೂ ಸದಸ್ಯರು ಮತ್ತು ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗೀಶ್ ಚಿದ್ಗಲ್ ಸ್ವಾಗತಿಸಿದರು ,ಪುರಂದರ ಪನ್ಯಾಡಿ ನಿರೂಪಿಸಿದರು, ಪದ್ಮನಾಭ ಏನೆಕಲ್ಲು ವಂದಿಸಿದರು.