ದ್ವಿತೀಯ ಪಿಯುಸಿ ಫಲಿತಾಂಶ; ಪ್ರಣೀತ್ ಹೆಚ್‌. ಡಿಸ್ಟಿಂಕ್ಷನ್ ಅಂಕದೊಂದಿಗೆ ತೇರ್ಗಡೆ

0


ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಡಬ ಸೈಂಟ್ ಜೋಕಿಮ್ಸ್ ಕಾಲೇಜಿನ ವಾಣಿಜ್ಯ ವಿ‍ಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೇಮಳ ಹೊಸಮನೆಯ ಪ್ರಣೀತ್ ಹೆಚ್‌. ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಪ್ರಣೀತ್ ರವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ ಶಾಲೆ ಹೇಮಳದಲ್ಲಿ ಪೂರೈಸಿ, 6ರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾಭ್ಯಾಸವನ್ನು ಸೈಂಟ್ ಜೋಕಿಮ್ಸ್ ಕಾಲೇಜು ಕಡಬದಲ್ಲಿ ಮಾಡಿರುತ್ತಾರೆ. ದ್ವಿತೀಯ ಪಿಯುಸಿಯಲ್ಲಿ 600ರಲ್ಲಿ 517 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರಣೀತ್ ರವರು ಸುಳ್ಯ ಜಿ.ಪಂ.ಇಂಜಿನಿಯರಿಂಗ್ ಉಪವಿಭಾಗದಲ್ಲಿ ಉದ್ಯೋಗಿಯಾಗಿರುವ ಬಾಲಕೃಷ್ಣ ಗೌಡ ಹೇಮಳ ಹೊಸಮನೆ ಮತ್ತು ಶ್ರೀಮತಿ ಶೀಲಾವತಿ ಬಾಲಕೃಷ್ಣ ದಂಪತಿಯ ಪುತ್ರ.