ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬಡ್ಡಡ್ಕ
ಅಮರ ಕ್ರೀಡಾ ಮತ್ತು ಕಲಾ ಸಂಘವು 25 ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬದ ವರ್ಷಾಚರಣೆಯ ಪ್ರಯುಕ್ತ ಮಕ್ಕಳ ಬೇಸಿಗೆ ಶಿಬಿರಕ್ಕೆ ಎ.9 ರಂದು ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರು ಹಾಗೂ ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕ್ರತಿ ಅಕಾಡೆಮಿ ಸದಸ್ಯರಾದ ಎನ್.ಎ.ಜ್ಞಾನೇಶ್ ರವರು ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಡಾ.ಜಯದೀಪ್ ಎನ್.ಎ ಅಧ್ಯಕ್ಷತೆ ವಹಿಸಿದ್ದರು.










ಮುಖ್ಯ ಅತಿಥಿಗಳಾಗಿ
ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ಶ್ರೀಮತಿ ಭಾಗೀರಥಿ ಪತ್ತುಕುಂಜ,
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ತೇಜಕುಮಾರ್ ಕೆ.ಆರ್,
ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೆ, ಸ್ನೇಹ ಶಾಲಾ ಶಿಕ್ಷಕ,ಶಿಬಿರದ
ಸಂಯೋಜಕ ದೇವಿಪ್ರಸಾದ್ ಕಾಯರ್ತೋಡಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಮೊದಲನೆಯ ದಿನದಂದು ಸುಮಾರು 82 ಮಕ್ಕಳು ಭಾಗವಹಿಸಿದರು.
ಬೆಳ್ಳಿ ಹಬ್ಬ ಸಮಿತಿಯ ಪ್ರ.ಕಾರ್ಯದರ್ಶಿ ವೆಂಕಟ್ರಮಣ ದೋಣಿಮೂಲೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.
ಸದಸ್ಯ ವೈಕುಂಠ ದೋಣಿಮೂಲೆ ವಂದಿಸಿದರು.ಕಾರ್ಯದರ್ಶಿ ಸನತ್ ಚಳ್ಳಂಗಾರು ಕಾರ್ಯಕ್ರಮನಿರೂಪಿಸಿದರು.ಸಂಘದಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಶಾಲಾ ಶಿಕ್ಷಕರು ಹಾಗೂ
ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.










