ಮುರ್ಕೆತ್ತಿ ಅಂಗನವಾಡಿ ಕೇಂದ್ರದಲ್ಲಿ ವಿನೂತನ ಕಾರ್ಯಕ್ರಮ

0

ಬಾಲಮೇಳ ಮತ್ತು ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ

ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ್ಕೆತ್ತಿ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಮತ್ತು ಮಕ್ಕಳ ಬೀಳ್ಕೊಡುಗೆ ಸಮಾರಂಭ ವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿ, ಈ ಕಾರ್ಯಕ್ರಮ ಹಲವಾರು ದಾನಿಗಳ ಸಹಕಾರದಿಂದ ನಡೆದಿರುವುದು ಶ್ಲಾಘನೀಯ, ಮುರ್ಕೆತ್ತಿ ಅಂಗನವಾಡಿ ಕೇಂದ್ರ ಒಳ್ಳೆಯ ಹೆಸರು ಪಡೆದಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಮಾತಾಡಿದರು.

ಸಭಾಧ್ಯಕ್ಷತೆ ಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ವಂದನಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ, ಡಾ ಕೆ ಶಿವರಾಮ ಕಾರಂತ ಸ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪ್ರಾಂಶುಪಾಲರಾದ ಬಾಲಸುಬ್ರಹ್ಮಣ್ಯ, ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ಗೌಡ ನಾರ್ಕೋಡು, ಸಮುದಾಯ ಆರೋಗ್ಯ ಕೇಂದ್ರದ ಕು ರಚನಾ, ಆಶಾ ಕಾರ್ಯಕರ್ತೆ ಶ್ರೀಮತಿ ದೇವಕಿ ಉಪಸ್ಥಿತರಿದ್ದರು.

ಪವನ್ ಕುಮಾರ್ ನಾಗನಮಜಲು ಪ್ರಾರ್ಥನೆಗೈದು, ಅಂಗನವಾಡಿ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಹಾಗೂ ಸಹಾಯಕಿಯವರಿಗೆ ಮತ್ತು ಅಂಗನವಾಡಿ ವತಿಯಿಂದ ಶ್ರೀಮತಿ ದೇವಕಿ ನಾಗನಮಜಲು ಇವರಿಗೆ ಅಭಿನಂದನೆ ನಡೆಸಲಾಯಿತು.

ಬಹುಮಾನ ಮತ್ತು ಸ್ಮರಣಿಕೆಯನ್ನು ಶ್ರೀಮತಿ ದೇವಕಿ ಸುಂದರ ನಾಗನಮಜಲು ಇವರು ನೀಡಿದ್ದು, ಊಟದ ವ್ಯವಸ್ಥೆಯನ್ನು ಸ್ಟಾರ್ ಸಂಜೀವಿನಿ ತಂಡ ವ್ಯವಸ್ಥೆ ಗೊಳಿಸಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಕಾರ್ಯಾಕ್ರಮ ಯಶಸ್ವಿ ಯಾಯಿತು.

ಶ್ರೀಮತಿ ದೇವಕಿ ನಾಗನಮಜಲು ಕಾರ್ಯಕ್ರಮ ನಿರೂಪಿಸಿದರು.