ಕಲ್ಮಕಾರು: ಆನೆಯ ಉಪಟಳ, ಆರು ವಿದ್ಯುತ್ ಕಂಬ ಧರಾಶಾಯಿ

0

ಕಲ್ಮಕಾರಿನಲ್ಲಿ ಆನೆಯ ಉಪಟಳದಿಂದ ಆರು ವಿದ್ಯುತ್ ಕಂಬಗಳು ಧರಾಶಾಯಿಯಾದ ಘಟನೆ ಏ.16 ರ ಸಂಜೆ ನಡೆದಿದೆ.

ಆನೆಯೊಂದು ಈಂದ್ ಮರವೊಂದನ್ನು ಬೀಳಿಸಿ ಹಾಕಿದ್ದು ಅದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು ಇದರಿಂದ ಆರು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಇದರಿಂದ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿದುಕೊಂಡಿದೆ.