ನಮ್ಮ ಗ್ರಾಮ- ನಮ್ಮ ಹೆಮ್ಮೆ ಸುದ್ದಿ ಅಭಿಯಾನದ ಸಭೆ

0

ದುಗ್ಗಲಡ್ಕ-ಕೊಯಿಕುಳಿ ವಾರ್ಡ್ ಸಮಿತಿ ರಚನೆ

ಸುಳ್ಯಕ್ಕೆ 60 ವರ್ಷ -ಸುದ್ದಿಗೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆ ಯಿಂದ ಆರಂಭಗೊಂಡಿರುವ ನಮ್ಮ ಗ್ರಾಮ -ನಮ್ಮ ಹೆಮ್ಮೆ ಅಭಿಯಾನದಡಿ ನಡೆಯಲಿರುವ ಸುದ್ದಿ ಸುಳ್ಯ ಹಬ್ಬದ ದುಗ್ಗಲಡ್ಕ- ಕೊಯಿಕುಳಿ ವಾರ್ಡ್ ಸಮಿತಿ ರಚಿಸುವ ನಿಟ್ಟಿನಲ್ಲಿ ಎ.18ರಂದು ದುಗ್ಗಲಡ್ಕ ಅಯ್ಯಪ್ಪ ಭಜನಾ ಮಂದಿರದ ಸಭಾಭವನದಲ್ಲಿ ಸಭೆ ನಡೆಸಿ ದುಗ್ಗಲಡ್ಕ- ಕೊಯಿಕುಳಿ ವಾರ್ಡ್ ಸಮಿತಿಯನ್ನು ರಚಿಸಲಾಯಿತು.

ನಮ್ಮಗ್ರಾಮ ನಮ್ಮಹೆಮ್ಮೆ ಅಭಿಯಾನದ ಬಗ್ಗೆ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್‌ರವರು ಮಾತನಾಡಿ ವಾರ್ಡ್ ನ ಧಾರ್ಮಿಕ,ಶೈಕ್ಚಣಿಕ ಕೇಂದ್ರಗಳ ಸಮಗ್ರ ಮಾಹಿತಿ ಸಂಗ್ರಹ, ವೀಡಿಯೋ
ದಾಖಲೀಕರಣ ಮಾಡಬೇಕಾಗುತ್ತದೆ. ಯಾವುದೇ ಕಸುಬು,ಗೃಹ ಉದ್ಯಮ,ವ್ಯಾಪಾರ,ವ್ಯವಹಾರ ಮಾಡುವವರ ಮಾಹಿತಿ ಸಂಗ್ರಹಣೆ.ಸೌರ ವಿದ್ಯುತ್ ಅಳವಡಿಕೆ,ಮಳೆ ನೀರು ಕೊಯ್ಲು ಮೂಲಕ ಸ್ವಾವಲಂಬಿ ಗ್ರಾಮವನ್ನಾಗಿ ಮಾಡಬೇಕು. ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಂಘಟಿತರಾಗಬೇಕು ಎಂದ ಅವರು ಸುದ್ದಿ ಸುಳ್ಯ ಹಬ್ಬದ ಸಂದರ್ಭದಲ್ಲಿ ವಾರ್ಡ್ ಮಟ್ಟದಲ್ಲಿ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಬಹುದು. ಮುಖ್ಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಆಯ್ಕೆ ಮಾಡಿ ಗುರುತಿಸಿ, ಸನ್ಮಾನಿಸಲಾಗುವುದು. ಊರಿನ ಏಳಿಗೆಗಾಗಿ ದುಡಿದು ಈಗ ನಿಧನರಾಗಿರುವ ಮರೆಯಾದ ಸಾಧಕರು ಎಂಬ ನೆಲೆಯಲ್ಲಿ ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದುಗ್ಗಲಡ್ಕ- ಕೊಯಿಕುಳಿ ವಾರ್ಡ್ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ದಯಾನಂದ ಸಾಲಿಯಾನ್ ಮೂಡೆಕಲ್ಲು, ಕುಶಾಲಪ್ಪ ಗೌಡ ಕಜೆ, ಅಧ್ಯಕ್ಷರಾಗಿ ಚಂದ್ರಶೇಖರ ಗೌಡ ಮೋಂಟಡ್ಕ, ಕಾರ್ಯಾಧ್ಯಕ್ಷರಾಗಿ ಹೇಮಂತಕುಮಾರ್ ಕಂದಡ್ಕ, ಸಂಚಾಲಕರಾಗಿ ಕೆ.ಟಿ.ವಿಶ್ವನಾಥ, ಸಂಯೋಜಕರಾಗಿ ಬಾಲಕೃಷ್ಣ ರೈ ದುಗ್ಗಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ನವ್ಯ ದಿನೇಶ್ ಕೊಯಿಕುಳಿ,ಕೋಶಾಧಿಕಾರಿಯಾಗಿ ಎನ್.ಬಿ.ಬಾಲಕೃಷ್ಣ ಗೌಡ, ಉಪಾಧ್ಯಕ್ಷರುಗಳಾಗಿ ಪ್ರಭಾವತಿ ರೈ ದುಗ್ಗಲಡ್ಕ, ಶ್ರೀಮತಿ ಶೀಲಾವತಿ ಮಾಧವ, ನಾರಾಯಣ ಟೈಲರ್, ತೀರ್ಥರಾಮ ಕೊಯಿಕುಳಿ, ಶ್ರೀಮತಿ ಶೈಲಜಾ ನೀರಬಿದಿರೆ, ಶ್ರೀಮತಿ ವಾರಿಜಾ ಕೊರಗಪ್ಪ ಕೊಯಿಕುಳಿ, ಭವಾನಿಶಂಕರ ಕಲ್ಮಡ್ಕ, ಭಾಸ್ಕರ ಪೂಜಾರಿ ಬಾಜಿನಡ್ಕ, ಇಬ್ರಾಹಿಂ ನೀರಬಿದಿರೆ, ಶೇಖರ್ ಕುದ್ಪಾಜೆ, ಶಶಿಧರ ಎಂ.ಜೆ,ಸುರೇಶ್ಚಂದ್ರ ಕಮಿಲ ಆಯ್ಕೆಯಾದರು.


ಸದಸ್ಯರುಗಳಾಗಿ ಲೋಕೇಶ್ ನೀರಬಿದಿರೆ, ಜಯಂತ ಕೊಯಿಕುಳಿ, ಚಿದಾನಂದ ಕೊಯಿಕುಳಿ, ವಿಜಯಕಾಂತ್ ಕೂಟೇಲು, ಕೃಷ್ಣ ಸ್ವಾಮಿ ಕಂದಡ್ಕ, ಶ್ರೀಮತಿ ನಯನ ಶೇಖರ್ ಆಯ್ಕೆಯಾದರು.