ಹೈದಂಗೂರು – ಬೊಳ್ಳಾಜೆ – ಕೊರತ್ತೋಡಿ ಭಾಗದ ಕಾಡಿನಲ್ಲಿ ಬೀಡು ಬಿಟ್ಟ ಕಾಡನೆಗಳ ಹಿಂಡು

0

ನಿನ್ನೆ ರಾತ್ರಿ ತೋಟಕ್ಕೆ ನುಗ್ಗಿದ ಕಾಡನೆಗಳ ಹಿಂಡು – ಕೃಷಿ ನಾಶ -ಅರಣ್ಯ ಇಲಾಖೆ ಯ ಅಧಿಕಾರಿಗಳ ಭೇಟಿ

ಕೆಲ ಸಮಯದ ಹಿಂದೆ ಹೈದಂಗೂರು-ಕೊಡಪಾಲಕ್ಕೆ ಬಂದ್ದಿದ್ದ ಕಾಡನೆಗಳ ಹಿಂಡು ಇದೀಗ ಮತ್ತೆ ಬಂದು, ಹೈದಂಗೂರು – ಬೊಳ್ಳಾಜೆ – ಕೊರತ್ತೋಡಿ ಭಾಗದಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿದೆ. ನಿನ್ನೆ ರಾತ್ರಿ ಹೈದಂಗೂರು ಬಳಿಯ ಬಂಡಿತಡ್ಕದ ರತ್ನವತಿ, ಶ್ಯಾಮಲಾ ಹಾಗೂ ತಿರುಮಲೇಶ್ವರಿ ಎಂಬವರ ತೋಟಗಳಿಗೆ ನುಗ್ಗಿದ ಕಾಡನೆಗಳ ಹಿಂಡು ಬಾಳೆ, ತೆಂಗಿನ ಗಿಡಗಳನ್ನು ನಾಶ ಮಾಡಿವೆ. ಅಲ್ಲದೇ ಪಂಪು ಪೈಫ್ ಗಳು ಕೂಡ ಹಾನಿಗೊಳಿಸಿದೆ. ವಾಸದ ಮನೆಯ ಬಳಿಯ ತೋಟಕ್ಕೆ ನುಗ್ಗಿದ ಕಾರಣದಿಂದ ಮನೆಯವರು ಹಾಗೂ ಸ್ಥಳೀಯರು ಆತಂಕಗೊಂಡಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಇಂದು ಕೃಷಿ ಹಾನಿಯಾದ ಸ್ಥಳಕ್ಕೂ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.