ಕಿತ್ತು ಹೋಗುತ್ತಿರುವ ಕಾಂಕ್ರೀಟ್ ರಸ್ತೆ
ಮೈಕ್ರೋ ಕಾಂಕ್ರೀಟ್ ಹಾಕಿ ಸರಿಪಡಿಸಿ ಕೊಡುತ್ತೇವೆ : ಇಲಾಖೆ ಪ್ರತಿಕ್ರಿಯೆ

ಗುತ್ತಿಗಾರಿನ ಮೆಟ್ಟಿನಡ್ಕ ಎಂಬಲ್ಲಿ ರಸ್ತೆಗೆ ಪಿ.ಡಬ್ಲೂ.ಡಿ ಮುಖಾಂತರ ಹಾಕಲಾಗಿದ್ದ 300 ಮೀ ಕಾಂಕ್ರೀಟ್ ಹಾಕಿ ತಿಂಗಳು ಕಳೆಯುವಷ್ಟರಲ್ಲೇ ಮೇಲ್ಪದರ ಕಿತ್ತು ಹೋಗಲು ಆರಂಭಿಸಿದ್ದು ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ. ಮೆಟ್ಟಿನಡ್ಕ ಈ ಕಾಂಕ್ರೀಟ್ ನ ಮೇಲ್ಪದರ ಹುಡಿ ಹುಡಿಯಾಗಿ ಹೋಗುತಿದ್ದು ವಾಹನ ಸಂಚರಿಸುವಾಗ ಕಾಂಕ್ರೀಟ್ ಗೆ ಹಾಕಿದ ಜಲ್ಲಿ ಮೇಲೆ ಬರಲಾರಂಭಿಸಿದೆ.
















ದೇವ ಎಂಬಲ್ಲಿ 100 ಮೀ ಹಾಗೂ ಮೆಟ್ಟಿನಡ್ಕದಲ್ಲಿ 300 ಮೀ ಕಾಂಕ್ರೀಟ್ ರಸ್ತೆಗೆ ಒಟ್ಟಾಗಿ 30 ಲಕ್ಷ ಅನುದಾನ ಬಳಸಲಾಗಿ ಈ ಕಾಮಗಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳಪೆ ಕಾಮಗಾರಿ ಬಗ್ಗೆ ಈಗಾಗಲೇ ಗ್ರಾಮಸ್ಥರು ಪಿ.ಡಬ್ಲೂ.ಡಿ ಇಲಾಖೆಗೆ ದೂರು ನೀಡಿ ವಾರ ಕಳೆದರೂ ಸರಿ ಪಡಿಸುವ ಭರವಸೆ ನೀಡಿದ್ದರೂ ಇಷ್ಟರ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡು ಬಂದಿದೆ.

ಈ ಬಗ್ಗೆ ಪಿ.ಡಬ್ಲೂ.ಡಿ ಇಂಜಿನಿಯರ್ ಪರಮೇಶ್ವರ ಅವರಲ್ಲಿ ವಿಚಾರಿಸಿದಾಗ ಕಾಂಕ್ರೀಟ್ ಗೆ ಉಪಯೋಗಿಸಿದ ಮರಳಿನ ಸಮಸ್ಯೆಯಿಂದ ಹೀಗಾಗಿದೆ. ಇದನ್ನು ಮೈಕ್ರೋ ಕಾಂಕ್ರೀಟ್ ಉಪಯೋಗಿಸಿ ಸರಿಪಡಿಸಿ ಕೊಡುತ್ತೇವೆ. ಆರಂಭದಲ್ಲಿ ಹತ್ತು ಮೀಟರ್ ನಷ್ಟು ಮೈಕ್ರೋ ಕಾಂಕ್ರೀಟ್ ಹಾಕಿ ನೋಡುತ್ತೇವೆ. ಅದು ಸರಿಯಾದರೆ ಪೂರ್ಣ ಪ್ರಮಾಣದಲ್ಲಿ ಅದನ್ನೇ ಹಾಕಿ ಕೊಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ತಕ್ಷಣವೇ ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು ಇಲ್ಲದಿದ್ದಲ್ಲಿ ಉನ್ನತ ತನಿಖೆಗೆ ದೂರು ಸಲ್ಲಿಸಲಾಗುವುದು ಸಾರ್ವಜನಿಕರು ಪ್ರತಿಕ್ರಿಯೆ ನೀಡಿದ್ದಾರೆ.










