ಕೊಲ್ಲಮೊಗ್ರು: ಮಕ್ಕಳ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ ಸಮಾರೋಪ ಸಮಾರಂಭ

0

ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕೊಲ್ಲಮೊಗ್ರು ಇದರ ನೇತೃತ್ವ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಮತ್ತು ಊರಿನವರ ಸಹಕಾರದೊಂದಿಗೆ ಏಳು ದಿನಗಳ ಕಾಲ ಶ್ರೀ ಮಯೂರ ಕಲಾಮಂದಿರ ಕೊಲ್ಲಮೊಗರು ಇಲ್ಲಿ ಮಕ್ಕಳ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಎ. 17 ನಡೆಯಿತು.


ತಂಬಿನಡ್ಕದಿಂದ ಮಕ್ಕಳ ಕುಣಿತ ಭಜನೆಯೊಂದಿಗೆ ಮೆರವಣಿಗೆ ಪ್ರಾರಂಭವಾಗಿ ಮಯೂರ ಕಲಾಮಂದಿರಕ್ಕೆ ಮೆರವಣಿಗೆ ಸಾಗಿ ಬಂತು.
ಚಂದ್ರಶೇಖರ ಕೊಂದಾಳ ರವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಅಧ್ಯಕ್ಷರಾಗಿ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಧ್ಯಕ್ಷ
ಹೇಮಂತ್ ದೋಲನ ಮನೆ ವಹಿಸಿದ್ದರು.


ದೀಪ ಬೆಳಗಿಸುವ ಮುಖೇನ ಸಭೆಯನ್ನು ಸುಳ್ಯ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಉಜಿರೆ ಹಾಗೂ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಹಿರಿಯ ಭಜಕರಾದ ಲಕ್ಷ್ಮೀನಾರಾಯಣ ಎಂ ಬೆಂಡೋಡಿ, ಎ. ಕೆ ಜಯರಾಂ ಅಂಬೆಕಲ್ಲುಮತ್ತು ಡಾಕ್ಟರ್ ನಂದಕುಮಾರ್ ಬಾಳಿಕಳ ಇವರನ್ನು ಸನ್ಮಾನಿಸಲಾಯಿತು.
ತೀರ್ಥರಾಮ ದೋಣಿಪಳ್ಳ
ಕಮಲಾಕ್ಷ ಮುಳ್ಳುಬಾಗಿಲು.
ಅನಂತರಾಮ ಮಣಿಯಾನ ಮನೆ.
ಹರಿಪ್ರಸಾದ್ ಮಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ
ಪ್ರಣಿತ ದೊಡ್ಡಿಹಿತ್ಲು
ಶರಣ್ಯ ಹರಿ ಹರ
ಪಂಚಮಿ ದೋಣಿಪಳ್ಳ ಪ್ರಾರ್ಥಿಸಿದರು.
ಭಜನಾ ಮಂದಿರದ ಗುರುಸ್ವಾಮಿಯಾದ ಮಾಧವ ಚಾಂತಾಳ ಶ್ರೀ ದೇವರಿಗೆ ಮಂಗಳಾರತಿ ನೆರವೇರಿಸಿದರು.
ಸುದಾಮಣಿ ಕುಂಞಟಿ ಸ್ವಾಗತಿಸಿದರು.
ಸತೀಶ್ ಟಿ ಎನ್ ನಿರೂಪಿಸಿದರು ಮತ್ತು ವಂದಿಸಿದರು.