ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಸರಕಾರಿ ಆಸ್ಪತ್ರೆಯ ನಿವೃತ್ತ ಉದ್ಯೋಗಿ, ಸಾಹಿತಿ ಜನಾರ್ದನ ಕಣಕ್ಕೂರು ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.









ಮೃತರು ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಶ್ರೀಮತಿ ಗಿರಿಜಾ, ಪುತ್ರ ಕ್ಯಾಪ್ಟನ್ ಡಾ.ಕಾರ್ತಿಕ್ ಕಣಕ್ಕೂರು, ಕೌಶಿಕ್ ಕಣಕ್ಕೂರು ಮತ್ತು ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಓರ್ವ ಸಾಹಿತಿಯಾಗಿ ಗುರುತಿಸಿಕೊಂಡಿದ್ದು ಹಲವಾರು ಕೃತಿಗಳನ್ನು ಲೇಖನಗಳನ್ನು ಬರೆದಿರುತ್ತಾರೆ. ಸುಳ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಣಕ್ಕೂರು ಮೆಡಿಕಲ್ಸ್ ಎಂಬ ಔಷಧಿ ಮಳಿಗೆಯನ್ನು ನಡಸಿಕೊಂಡು ಬರುತ್ತಿದ್ದರು.










