ಎ. 22, 23 : ಮರಕತ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ – ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ

0


ನಾಲ್ಕೂರು ಗ್ರಾಮದ ಮರಕತ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಎ. ೨೨, ೨೩ರಂದು ನಡೆಯಲಿದೆ.


ಏಪ್ರಿಲ್ ೧೫ರಂದು ಮೂಹರ್ತದ ಗೊನೆ ಕಡೆಯು ಇದರ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಎ. ೨೨ ರಂದು ಪೂ.ಗಂಟೆ ೮:೩೦ ಕ್ಕೆ ಮಹಾಪೂಜೆ, ನಂತರ ಭಜನಾ ಕಾರ್ಯಕ್ರಮ, ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ನಡೆಯಲಿದೆ. ಸಾಮೂಹಿಕ ಚಂಡಿಕಾ ಹವನದ ಪ್ರಾರ್ಥನೆ, ಪೂ. ಘಂಟೆ ೧೧ಕ್ಕೆ ಉಗ್ರಾಣ ತುಂಬಿಸುವುದು, ಮಧ್ಯಾಹ್ನ ಸಾಮೂಹಿಕ ಚಂಡಿಕಾ ಹವನದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ನಡೆದು, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮ ಕ್ಕೆ ಮಹಾಪೂಜೆ, ೯ ರಿಂದ ದೇವರ ದರ್ಶನ ಬಲಿ, ನಂತರ ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಸಂಜೆ ಗಂಟೆ ೫ ರಿಂದ ಮಕ್ಕಳ ಕುಣಿತ ಭಜನೆ, ೬ ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿನ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ, ರಾತ್ರಿ ೭ ರಿಂದ ಯೋಗ ತರಬೇತುದಾರರಾದ ಶರತ್ ಮರ್ಗಿಲಡ್ಕ ಇವರ ಶಿಷ್ಯೆ ಕು.ಹವೀಕ್ಷಾ ಎಸ್. ಆರ್. ರಾಷ್ಟ್ರೀಯ ಯೋಗ ಪಟು ಅವರಿಂದ ಯೋಗಾಸನ, ನಂತರ ಕು. ಹವೀಕ್ಷ ಮತ್ತು ಚಶ್ಮ ಇವರಿಂದ ನೃತ್ಯ ರಾತ್ರಿ ೭ರಿಂದ ತುಳು ಹಾಸ್ಯಮಯ ನಾಟಕ ನೇಸರ ಕಲಾವಿದೆ ಇವರಿಂದ ರಚಿಸಿ ನಿರ್ದೇಶಿಸುವ ಕುತೂಹಲಭರಿತ ತುಳು ಹಾಸ್ಯ ನಾಟಕ ‘ಸತ್ಯ ಜಿಟಿಕೆ’ ನಡೆಯಲಿರುವುದು.


ಎ. ೨೩ರಂದು ಬೆಳಿಗ್ಗೆ ಗಣಪತಿ ಹವನ, ಕಳಸ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಪ್ರಸಾದ ವಿತರಣೆ, ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ೭ ಗಂಟೆಗೆ ರಂಗ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ ೮ ರಿಂದ ಶ್ರೀ ಕ್ಷೇತ್ರದ ದೈವಗಳ ಭಂಡಾರ ತೆಗೆದು, ೯ ರಿಂದ ಶ್ರೀ ಚಾಮುಂಡಿ ಅಮ್ಮನವರ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ರಾತ್ರಿ ಗಂಟೆ ೧ ರಿಂದ ವರ್ಣಾರ ಪಂಜುರ್ಲಿ ಹಾಗೂ ಪುರುಷದ ದೈವದ ನೇಮ, ೪ ರಿಂದ ಕುಪ್ಪೆ ಪಂಜುರ್ಲಿ, ಭೂಮಿಗುಳಿಗ ಹಾಗೂ ರಾಹು ಗಳಿಗ ದೈವಗಳ ನೇಮೋತ್ಸವ ನಡೆಯಲಿರುವುದು.