ಡಾ.ಗೋಪಿನಾಥ್ ಬೆಳ್ಳಾರೆಯವರಿಗೆ ಪತ್ನಿ ವಿಯೋಗ

0

ಕಲಾವಿದ ಹಾಗೂ ವೈದ್ಯರಾದ ಪೆರುವಾಜೆಯ ಡಾ.ಗೋಪಿನಾಥ ಬೆಳ್ಳಾರೆಯವರ ಧರ್ಮಪತ್ನಿ ಶ್ರೀಮತಿ ಸುಗಂಧಿಯವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜವಾಗಿ ದೀರ್ಘಕಾಲದಿಂದ ಅವರು ಅಸೌಖ್ಯದಿಂದಿದ್ದರು.
ಅವರು ಪತಿ ಡಾ.ಗೋಪಿನಾಥ್ ಬೆಳ್ಳಾರೆ, ಪುತ್ರಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು, ಅಳಿಯ ರಾಧಾಕೃಷ್ಣ ಬೊಳ್ಳೂರು, ಸೊಸೆ ಶ್ರೀಮತಿ ಲಕ್ಷ್ಮೀ ಶುಭನಾಥ್ , ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಪೂರ್ವಾಹ್ನ 10.30 ಕ್ಕೆ ನಡೆಯಲಿರುವುದೆಂದು ತಿಳಿದುಬಂದಿದೆ.