ಎರಡು ತಾಸು ಅಂಗಡಿಗಳು ಬಂದ್, ಪ್ರತಿಭಟನಾ ಸಭೆ

ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸುಬ್ರಹ್ಮಣ್ಯದಲ್ಲಿ ಹಿಂದೂ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆಯಿತು.









ಘಟನೆಯನ್ನು ಖಂಡಿಸಿ ಪೇಟೆಯು ಎರಡು ತಾಸು ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರು. ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಘಟನೆಯನ್ನು ಖಂಡಿಸಿದರು, ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ನಿವೃತ್ತ ಅಧಿಕಾರಿ ಅಶೋಕ್ ಮೂಲೆಮಜಲು ಮಾತನಾಡಿದರು.
ಪ್ರಮುಖರಾದ ಪದ್ಮಕುಮಾರ್ ಗುಂಡಡ್ಕ, ಸುಜಾತ ಕಲ್ಲಾಜೆ, ರಾಜೇಶ್ ಎನ್.ಎಸ್., ಶ್ರೀಕುಮಾರ್ ಬಿಲದ್ವಾರ, ಡಾ.ರವಿಕಕ್ಕೆಪದವು, ಲಲಿತಾ ಗುಂಡಡ್ಕ, ಗಿರೀಶ್ ಆಚಾರ್ಯ, ಜಯಪ್ರಕಾಶ್ ಕೂಜುಗೋಡು, ಡಾ.ತಿಲಕ್ ಎ.ಎ., ಯಶೋದ ಕೃಷ್ಣ, ಯಶವಂತ ಕೊಪ್ಪಲಗದ್ದೆ, ಕಿರಣ್ ಪೈಲಾಜೆ, ಜಯರಾಮ ಸುಬ್ರಹ್ಮಣ್ಯ, ದುಗ್ಗಪ್ಪ ನಾಯ್ಕ, ರಮೇಶ್ ಪೈಲಾಜೆ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
.










