ಬೆಳ್ಳಾರೆ GIS ಸ್ಟಾರ್ಟ್ ಆಫ್‌ಗೆ ಎಲಿವೇಟ್ -24 ಪ್ರಶಸ್ತಿ

0


ಕರ್ನಾಟಕ ಸರ್ಕಾರದ ಇಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆಯ ಕರ್ನಾಟಕ ಸ್ಟಾರ್ಟ್ ಆಫ್ ವಿಭಾಗವು ಆಯೋಜಿಸಿದ್ದ ಎಲಿವೇಟ್ -2024 ರ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಬೆಳ್ಳಾರೆ GIS ಸಂಸ್ಥೆಯು ಪ್ರಶಸ್ತಿಯನ್ನು ಪಡೆದಿದೆ. ಕರ್ನಾಟಕದ ನವೋದ್ಯಮಗಳನ್ನು ಗುರುತಿಸುವುದು ಎಲಿವೇಟ್ ಕಾರ್ಯಕ್ರಮದ ಉದ್ದೇಶವಾಗಿದ್ದು ಅವುಗಳಿಗೆ ತಮ್ಮ ಉತ್ಪನ್ನಗಳನ್ನು ಮುಂದಿನ ಹಂತಕ್ಕೆ ಅಭಿವೃದ್ದಿಗೊಳಿಸಲು ಸರ್ಕಾರವು ಬೆಂಬಲವನ್ನು ನೀಡುತ್ತಾ ಬಂದಿದೆ.

ಮಾ. 26ರಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಯು.ಆರ್.ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಐಟಿ/ಬಿಟಿ ಹಾಗು ಗ್ರಾಮೀಣ ಅಭಿವೃದ್ದಿ / ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ವಿತರಿಸಿದರು.

ಬೆಳ್ಳಾರೆ GIS ಸ್ಟಾಟ್‌ಆಫ್ ಸಂಸ್ದೆಯ ಡಾ. ಬಿ. ನವೀನಚಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಇಲೆಕ್ಟ್ರಾನಿಕ್, ಐಟಿ/ಬಿಟಿ ಇಲಾಖೆಯ ರಾಜ್ಯ ಸರ್ಕಾರದ ಕಾರ್ಯದರ್ಶಿ, ಏಕರೂಪ್ ಕೌರ್‍ಕ, ಕರ್ನಾಟಕ ಸ್ಟಾರ್ಟ್ ಅಪ್ ಇಲಾಖೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಹುಲ್ ಶರಣಪ್ಪ ಸಂಕನೂರ್, ಸ್ಟಾರ್ಟ್‌ಆಫ್ ವಿಷನ್ ಬ್ಲಾಕ್ ಬೆಂಗಳೂರು ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭೂ ಮಾಹಿತಿ ವಿಜ್ಞಾನ ಆಧಾರಿತ ಕೃಷಿಗೆ ಸಂಬಂಧಪಟ್ಟ ಉಪಕರಣವನ್ನು ತಯಾರಿಸುವ ನವ ವಿಧಾನ ಆವಿಷ್ಕಾರಕ್ಕೆ ಈ ಪ್ರಶಸ್ತಿ ಲಭಿಸಿದೆ. ಬೆಳ್ಳಾರೆ GIS ಸ್ಟಾರ್ಟ್ ಆಫ್ ದೂರ ಸಂವೇದಿ ಹಾಗೂ ಭೂ ಮಾಹಿತಿ ಆಧಾರಿತ ಕಂಪೆನಿಯಾಗಿದ್ದು,N.I.T.K. ವಿಜ್ಞಾನ ಮತ್ತು ತಂತ್ರಜ್ಞಾನ ಉಧ್ಯಮ ಶೀಲತಾ ಪ್ಯಾಕ್ (STEP) ಸುರತ್ಕಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯು ಸಂಶೋಧನಾ ಕೇಂದ್ರಕ್ಕೆ ನವದೆಹಲಿಯ DSIR ಸಂಸ್ಥೆಯು R&D ಮಾನ್ಯತೆ ನೀಡಿರುತ್ತಾರೆ. ಕಂಪೆನಿಯು ಈಗಾಗಲೇ ಕೃಷಿ, ಆರೋಗ್ಯ, ಮಣ್ಣು, ಟೆಲಿಕಾಂ ಇತ್ಯಾದಿ ಕ್ಷೇತ್ರಗಳಲ್ಲಿ R&D ಆಧಾರಿತ ಸಂಶೋಧನಾ ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದ್ದು ಅಂಚೆ ಇಲಾಖೆಯೊಂದಿಗೆ GIS ಆಧಾರಿತ ಸಲಹಾ ಯೋಜನೆಗಳನ್ನು ನಡೆಸುತ್ತಿದೆ. ಕೃಷಿ, ಪರಿಸರ, ಟೆಲಿಕಾಂ, ಇತ್ಯಾದಿ ಕ್ಷೇತ್ರಗಳಲ್ಲಿ GIS ಆಧಾರಿತ ಸೇವೆ ಮತ್ತು ಉಪಕರಣಗಳನ್ನು ತಯಾರಿಸುವ ಯೋಜನೆಗಳ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಡಾ. ನವೀನಚಂದ್ರ ಶೆಟ್ಟಿ ಆಶಯ ಹೊಂದಿದ್ದಾರೆ.