ಪತಿಯ ಹನ್ನೊಂದನೇ ದಿನದ ಕಾರ್ಯಕ್ರಮದಂದು ಪತ್ನಿ ಅಸ್ವಸ್ಥಗೊಂಡು ಮೃತ್ಯು

0

ಕನಕಮಜಲು ಗ್ರಾಮದಲ್ಲಿ ನಡೆದ ಘಟನೆ

ಪತಿ ನಿಧನರಾಗಿ ಹನ್ನೊಂದನೇ ದಿನದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಪತ್ನಿ ಅಸ್ವಸ್ಥಗೊಂಡು ಕೊನೆಯುಸಿರೆಳೆದ ಘಟನೆ ಕನಕಮಜಲು ಗ್ರಾಮದ ನೆಡಿಲಿನಲ್ಲಿ ನಡೆದಿದೆ.

ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡರು ಎ. 17 ರಂದು ನಿಧನರಾಗಿದ್ದರು. ಅವರ ಕಾರ್ಯಕ್ರಮ ಎ.28ರಂದು‌ ನೆಡಿಲು ಮನೆಯಲ್ಲಿ ನಡೆಯುತ್ತಿತ್ತು. ಮಧ್ಯಾಹ್ನ ಕಾರ್ಯ ನಡೆಯುತ್ತಿದ್ದಂತೆ ದಿ.ಸೋಮಪ್ಪರ ಪತ್ನಿ ಸುಬ್ಬಕ್ಕ ಅಸ್ವಸ್ಥಗೊಂಡು ಕುಸಿದರು. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಯಿತು. ಆ ವೇಳೆಗೆ ಅವರು ಕೊನೆಯಿಸಿರೆಳೆದರೆಂದು ತಿಳಿದುಬಂದಿದೆ.

ಮೃತರು ಪುತ್ರಿಯರಾದ ನಯನ ವಿಶ್ವನಾಥ ಹುಲಗೂರು ಮತ್ತು ಚೇತನಾ ಗಣೇಶ ಬೆಳ್ಳಿಪ್ಪಾಡಿ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ