ಪೆರುವಾಜೆ : ಅಸಮರ್ಪಕ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ

0

ರಸ್ತೆ ಬದಿ ಜರಿದು ಹೊಳೆಗೆ ಬಿದ್ದ ಮಣ್ಣು – ಬಿರುಕು ಬಿಟ್ಟ ಡಾಮರು ರಸ್ತೆ

ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ – ತಕ್ಷಣ ತಡೆಗೋಡೆ ನಿರ್ಮಾಣ ಮಾಡಲು ಪೈಪ್ ಲೈನ್ ಗುತ್ತಿಗೆದಾರರಿಗೆ ಸೂಚನೆ

ಬೆಳ್ಳಾರೆ ಪೆರುವಾಜೆ ಸವಣೂರು ರಸ್ತೆಯ ಪೆರುವಾಜೆ ಗ್ರಾಮದ ಮಾಪ್ಲಮಜಲು ಬಳಿ ಎ.27 ರಂದು ಸುರಿದ ಭಾರಿ ಮಳೆಗೆ ಗೌರಿಹೊಳೆಗೆ ತಾಗಿಕೊಂಡಿರುವ ರಸ್ತೆಯ ಬದಿ ಕುಸಿದು ಡಾಮರು ರಸ್ತೆಯು ಬಿರುಕು ಬಿಟ್ಟಿದ್ದು ಅಪಾಯದ ಭೀತಿಯಲ್ಲಿದೆ.


ಹಾನಿಯನ್ನು ವೀಕ್ಷಿಸಲು ಸುಳ್ಯ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಎ.28 ರಂದು ಭೇಟಿ ನೀಡಿದರು.
ಪಿ.ಡಬ್ಲ್ಯುಡಿ ಇಂಜಿನಿಯರ್, ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್ ಲೈನ್ ಅಳವಡಿಸಿದ ಗುತ್ತಿಗೆದಾರರು ಹಾಗೂ ರಸ್ತೆಯ ಫಲಾನುಭವಿಗಳು ಅಲ್ಲಿಗೆ ಆಗಮಿಸಿದ್ದರು.


ಅವ್ಯವಸ್ಥಿತ ನೀರಿನ ಪೈಪ್ ಲೈನ್ ಅಳವಡಿಸಿದ ಗುತ್ತಿಗೆದಾರರ ವಿರುದ್ಧ ಗರಂ ಆದ ಶಾಸಕರು ತಕ್ಷಣ ತಾತ್ಕಾಲಿಕ ತಡೆಗೋಡೆ ನಿರ್ಮಿಸಿಕೊಡುವಂತೆ ಸೂಚಿಸಿದರು ಹಾಗೂ ಮಳೆಗಾಲದಲ್ಲಿ ಹೊಳೆಯನೀರು ಹರಿದು ರಸ್ತೆಯು ಮುಳುಗಡೆಗೊಳ್ಳುವುದರಿಂದ ರಸ್ತೆಯ ಎತ್ತರವನ್ನು ಹೆಚ್ಚಿಸಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಹಾಗೂ ಶಾಶ್ವತ ತಡೆಗೋಡೆ ನಿರ್ಮಿಸಲು ಎಸ್ಟಿಮೇಟ್ ತಯಾರಿಸುವಂತೆ ಪಿಡಬ್ಲ್ಯುಡಿ ಇಂಜಿನಿಯರ್ ಗೆ ಆದೇಶಿಸಿದರು.


ಈ ಸಂದರ್ಭದಲ್ಲಿ ಸಂಬಂದಪಟ್ಟ ಅಧಿಕಾರಿಗಳು ಹಾಗೂ ಪೆರುವಾಜೆ ಗ್ರಾಮಪಂಚಾಯತಿ ಕಾರ್ಯದರ್ಶಿ ತಿರುಮಲೇಶ್ ಮತ್ತು ಸಿಬ್ಬಂದಿಗಳು ಗ್ರಾಮಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ,ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಪನ್ನೆಗುತ್ತು, ಕೆ. ಪಿ.ಎಸ್ ಬೆಳ್ಳಾರೆ ಇದರ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀನಾಥ್ ರೈ
ಬಾಳಿಲ, ಸುಬ್ರಾಯ ಭಟ್ ನೀರ್ಕಜೆ,ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಉಮೇಶ್ ಕೆ. ಎಂ.ಬಿ. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ಕುಶಾಲಪ್ಪ ಗೌಡ ಪೆರುವಾಜೆ,ಬೆಳ್ಳಾರೆ ಸಹಕಾರಿ ಸಂಘದ ನಿರ್ದೇಶಕರಾದ ನಾರಾಯಣ ಕೊಂಡೆಪ್ಪಾಡಿ,ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಬಾ .ಜ.ಪ .ಮುಕ್ಕೂರು ಬೂತಿನ ಅಧ್ಯಕ್ಷ ದಿನೇಶ್ ಕರ್ಬುತ್ತೊಡಿ, ನಾಗರಾಜ ಉಪಾಧ್ಯಾಯ ಕಜೆ, ದಿನೇಶ್ ಉಪಾಧ್ಯಾಯ ಕಜೆ, ಕಾನಾವ್ ಕನ್ಸ್ಟ್ರಕ್ಷನ್ ಇಸ್ಮಾಯಿಲ್ ಕಾನಾವು, ರಜಾಕ್ ಕಾನಾವು,ರಾಜೇಶ್ ಸಾರಕರೆ, ಸೋಮನಾಥ ಗೌಡ ಕಂಡಿಪ್ಪಾಡಿ, ಸುಬ್ರಹ್ಮಣ್ಯ ಗೌಡ ಒರೊಂಕು, ಭರತ್ ಬೊನ್ಯಕುಕ್ಕು, ವಸಂತ ನೀರ್ಕಜೆ, ಸಮೀರ್ ಕುಂಡಡ್ಕ, ಮುಂತಾದವರು ಹಾಜರಿದ್ದರು.