ಪೆರುವಾಜೆ ದೇವಸ್ಥಾನದ ಜಾಗದ ವಿವಾದ – ಮಾತುಕತೆಯಲ್ಲಿ ಇತ್ಯರ್ಥಪಡಿಸಲು ನಿರ್ಧಾರ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ಉದ್ಭವ ಜಮೀನು ದೇವರಮಾರು ಸರಕಾರಿ ಸ್ಥಳ ಸಂ. ನಂ. 98/2 ರಲ್ಲಿದ್ದು ಈ ಸ್ಥಳದಲ್ಲಿದ್ದ ಮರಗಳನ್ನು ನೆಲಸಮ ಮಾಡಿ ದೇವರ ಕಾಡನ್ನು ಇನ್ನಿಲ್ಲದಂತೆ ಮಾಡಿ ಸರಕಾರಿ ಸ್ಥಳ ಕಬಳಿಸಲು ಹುನ್ನಾರ ನಡೆಸಿರುವುದಾಗಿ ಸುಳ್ಯ ಶಾಸಕರಿಗೆ, ತಹಶೀಲ್ದಾರ್ ರಿಗೆ, ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಹಾಗೂ ಆಡಳಿತಾಧಿಕಾರಿ ಅವರಿಗೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿಯ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಬಜ ಮನವಿ ಮಾಡಿದ್ದು ಈ ಆಕ್ರಮಣ ಮಾಡಿರುವವರ ಮೇಲೆ ಸೂಕ್ತ ಕ್ರಮ ಹಾಗೂ ಈ ಜಮೀನನ್ನು ದೇವರ ಹೆಸರಿಗೆ ಮೀಸಲಿಡಲು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು.


ಇಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ,ಪಿಡಿಒ ತಿರುಮಲೇಶ್ ,ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆಯವರು ವಿವಾದ ಇರುವ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ಮಾಡಲಾಯಿತೆಂದು ತಿಳಿದು ಬಂದಿದೆ.


ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವುದೆಂದು ನಿರ್ಧಾರ ಮಾಡಲಾಗಿದ್ದು
ಮೇ.2 ನೇ ತಾರೀಖಿನಂದು ಪಂಚಾಯತ್ ಕಚೇರಿಯಲ್ಲಿ ಮೀಟಿಂಗ್ ನಡೆಯಲಿದೆ ಎಂದು ಜಗನ್ನಾಥ ಪೂಜಾರಿಯವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಕಚೇರಿ ನಿರ್ವಾಹಕ ವಸಂತ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.