ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 34 ವರ್ಷಗಳ ಕಾಲ ಉದ್ಯೋಗಿಯಾಗಿದ್ದು, ಎ.30ರಂದು ನಿವೃತ್ತರಾಗುತ್ತಿರುವ ಗುಣವತಿ ಪಿ.ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಎ.29ರಂದು ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು.
ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ನಿವೃತ್ತರಾಗುತ್ತಿರುವ ಶ್ರೀಮತಿ ಗುಣವತಿ ಹಾಗೂ ಅವರ ಪತಿ ಮನೋಜ್ ಕುರುಂಜಿಭಾಗ್ ರನ್ನು ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.















ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ, ನಿರ್ದೇಶಕರುಗಳಾದ ಕೇಶವ ಮಾಸ್ತರ್ ಹೊಸಗದ್ದೆ, ಪ್ರಭೋದ್ ಶೆಟ್ಟಿ ಮೇನಾಲ, ಚಂದ್ರಶೇಖರ ದೊಡ್ಡೇರಿ, ಶಿವರಾಮ ಕೇರ್ಪಳ, ಹರಿಣಾಕ್ಷಿ ರೈ ಬೇಲ್ಯ, ನವ್ಯಾ ಚಂದ್ರಶೇಖರ, ಡಿಸಿಸಿ ಬ್ಯಾಂಕ್ ಸೂಪರ್ ವೈಸರ್ ರತನ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ.ಸ್ವಾಗತಿಸಿದರು.
ನಿರ್ದೇಶಕ ಶಿವರಾಮ ಕೇರ್ಪಳ ಧನ್ಯವಾದ ಸಮರ್ಪಿಸಿದರು.










