ತಾಲೂಕು ಹೋಬಳಿ ಕೇಂದ್ರವಾದ ಪಂಜದಲ್ಲಿ ನಿಂತು ಹೋಗಿದ್ದ ಆಧಾರ್ ತಿದ್ದುಪಡಿ ವ್ಯವಸ್ಥೆಯನ್ನು ಪುನ ಸ್ಥಾಪಿಸಲು ಸಾರ್ವಜನಿಕರ ಪರವಾಗಿ ಲಯನ್ಸ್ ಕ್ಲಬ್ ಪಂಜ ಪುತ್ತೂರು ವಿಭಾಗದ ಅಂಚೆ ಇಲಾಖೆ ಮುಖ್ಯಸ್ಥರಿಗೆ ಈ ಹಿಂದೆ ಮನವಿ ಸಲ್ಲಿಸಿತ್ತು.
ತಕ್ಷಣ ಸ್ಪಂದಿಸಿದ ಪುತ್ತೂರು ವಿಭಾಗದ ಸೂಪರ್ ಡೆಂಟ್ ಆಫ್ ಪೋಸ್ಟಲ್ ಆಫೀಸರ್ ಏಪ್ರಿಲ್ 26 ರಿಂದ ಆರಂಭಗೊಳ್ಳುವಂತೆ ಪಂಜ ಅಂಚೆ ಕಛೇರಿಯಲ್ಲಿ ಪ್ರತಿದಿನ ಮಧ್ಯಾಹ್ನ 1.30 ರಿಂದ ಸಂಜೆ 5 ರವರೆಗೆ ಆಧಾರ್ ತಿದ್ದುಪಡಿ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದಾರೆ.















ಪಂಜ ಪರಿಸರದ ಫಲಾನುಭವಿಗಳು ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಪಂಜ ಅಧ್ಯಕ್ಷ ಲ. ಶಶಿಧರ ಪಳoಗಾಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಸತೀಶ್ ಕೆ, ಆಧಾರ್ ತಿದ್ದುಪಡಿಯ ನಿರ್ವಹಣಾ ಸಿಬ್ಬಂದಿ ದರ್ಶನ್, ಲ. ವಾಸುದೇವ ಮೇಲ್ಪಾಡಿ, ಲ. ರಶ್ಮಿ ಪಳoಗಾಯ ಉಪಸ್ಥಿತರಿದ್ದರು.










