ಕೆ.ವಿ.ಜಿ ದಂತ ವಿದ್ಯಾಲಯ ಪರಿದಂತ ವಿಭಾಗದಲ್ಲಿ ಇಮ್ಮಿಡಿಯಟ್ ಇಂಪ್ಲಾಂಟ್ ಬಗ್ಗೆ ಕಾರ್ಯಕ್ರಮ

0

ಇರಾನ್ ದೇಶದ ಇಸ್ಲಾಮಿಕ್ ಆಜಾದ್ ಯುನಿವರ್ಸಿಟಿ ಇಷ್ಪಹಾನ್ ಇಲ್ಲಿನ ಪರಿದಂತ ವಿಭಾಗದ ಪ್ರಾಧ್ಯಾಪಕ ಡಾ. ಮೊಹಮ್ಮದ್ ಕೆಟಾಬಿಯವರಿಂದ ವಿದ್ಯಾರ್ಥಿಗಳಿಗೆ ತರಬೇತಿ

ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜಿನ ಪರಿದಂತ ವಿಭಾಗದಿಂದ ಮೇ.2ರಂದು ಇಮ್ಮಿಡಿಯಟ್ ಇಂಪ್ಲಾಂಟ್ ವಿಷಯದ ಕುರಿತು ಮುಂದುವರೆದ ದಂತ ಶಿಕ್ಷಣ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಇರಾನ್ ದೇಶದ ಇಸ್ಲಾಮಿಕ್ ಆಜಾದ್ ಯುನಿವರ್ಸಿಟಿ ಇಷ್ಪಹಾನ್ ಇಲ್ಲಿನ ಪರಿದಂತ ವಿಭಾಗದ ಪ್ರಾಧ್ಯಾಪಕಾರಾದ ಡಾ. ಮೊಹಮ್ಮದ್ ಕೆಟಾಬಿಯವರು ತರಬೇತಿ ನೀಡಿದರು. ಇವರ ಜೊತೆ ಇರಾನ್ ನ ಖ್ಯಾತ ದಂತ ವೈದ್ಯ ಡಾ. ಮೆಹರ್ ಅವರು ಕೂಡ ಆಗಮಿಸಿದ್ದರು.
ಕೆ.ವಿ.ಜಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕ ಮೌರ್ಯ ಆರ್. ಕುರುಂಜಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಪರಿದಂತ ವಿಭಾಗದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ನೂತನ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹಿಸಿದರು.
ಕಾಲೇಜಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆಯವರು ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವಂತೆ ತಿಳಿಸಿದರು ಹಾಗೂ ಪ್ರತ್ಯೇಕ ಇಂಪ್ಲಾAಟೋಲಜಿ ವಿಭಾಗವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಅವರು ಮಾತನಾಡಿ ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ನಾತ್ತಕೋತ್ತರ ವಿಭಾಗದ ನಿರ್ದೇಶಕರಾದ ಡಾ. ಶರತ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಮೊಹಮ್ಮದ್ ಕೆಟಾಬಿಯವರು ಕಾಲೇಜಿನ ಆಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮದ ರೂವಾರಿ ಹಾಗೂ ಪರಿದಂತ ವಿಭಾಗದ ಮುಖ್ಯಸ್ಥರಾದ ಡಾ. ದಯಾಕರ್ ಎಂ.ಎA.ಸ್ವಾಗತಿಸಿದರು. ಡಾ. ಶಿಲ್ಪ ರವರು ವಂದಿಸಿದರು. ಡಾ. ಇಂಪನ ಮತ್ತು ಡಾ. ಚಿತ್ತಾರ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸೌಪರ್ಣಿಕ ಹಾಗೂ ಡಾ. ಐಶ್ವರ್ಯ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದರು.