
ದುಗ್ಗಲಡ್ಕದ ಕೊಯಿಕುಳಿ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಸೇವಾ ಸಮಿತಿ ಆಶ್ರಯದಲ್ಲಿ ವಿಶೇಷ ಆರಾಧನಾ ಕಾರ್ಯಕ್ರಮ ಮೇ.4 ರಂದು ನಡೆಯಿತು.
ಭಜನಾ ಮಂದಿರದ ಆರಂಭದಿಂದಲೂ ಮಂದಿರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಇತ್ತೀಚಿನ ವರ್ಷಗಳಲ್ಲಿ ಅಗಲಿದ ವೆಂಕಟ್ರಮಣ ಭಟ್ ಮುಂಡಕಜೆ, ವಾಡಿಯಪ್ಪ ಗೌಡ ನೀರಬಿದಿರೆ, ಚಾತು ನಾಯರ್ ನೀರಬಿದಿರೆ, ಕೃಷ್ಣಮೂಲ್ಯ ನೀರಬಿದಿರೆ, ಕೃಷ್ಣಪ್ಪ ನಾಯ್ಕ ನೀರಬಿದಿರೆ, ಶಿವಪ್ಪ ನಾಯ್ಕ ಕಲ್ಮಡ್ಕ ರವರ ಸ್ಮರಣಾರ್ಥ ವಿಶೇಷ ಆರಾಧನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಬೆಳಿಗ್ಗೆ ದುಗ್ಗಲಾಯ ಮಹಿಳಾ ಭಜನಾ ತಂಡ ಮತ್ತು ಕಾಯರ್ತೋಡಿ ಮಹಾವಿಷ್ಣು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ವಿಷ್ಣುಸಹಸ್ರನಾಮ ಪಠಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆ ಸಂಪಾದಕರಾದ ಹರೀಶ್ ಬಂಟ್ವಾಳ್ ಆಗಮಿಸಿದ್ದರು.









ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ಪ್ರ.ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಭಾಸ್ಕರ ಪೂಜಾರಿ ಬಾಜಿನಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುಳ್ಯ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಸತೀಶ್ ಎಂ.ಕೆ. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ, ಮಿತ್ರ ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಮೊದಲಾದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಭಟ್ ರೆಂಜಾಳ ಮತ್ತು ಬಳಗದವರು ವೈದಿಕ ಕಾರ್ಯ ನಿರ್ವಹಿಸಿದರು.

ಅಗಲಿದ ಮನೆಯವರಿಗೆ ಸ್ಮರಣಿಕೆ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.
ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.










