ಸುಬ್ರಹ್ಮಣ್ಯ: “ಕುಕ್ಕೆ ಶ್ರೀ ಹೈಟ್ಸ್” ವಸತಿ ಸಮುಚ್ಚಯ ಲೋಕಾರ್ಪಣೆ

0

ಕುಕ್ಕೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿಯ ಆದಿ ಸುಬ್ರಮಣ್ಯ ರಸ್ತೆ ಬದಿಯಲ್ಲಿ ನೂತನವಾಗಿ ನಿರ್ಮಿಸಲಾದ ವಸತಿ ಸಮುಚ್ಚಯ ಕುಕ್ಕೇಶ್ರೀ ಹೈಟ್ಸ್ ಮೇ.5 ರಂದು ಲೋಕಾರ್ಪಣೆಗೊಂಡಿತು. ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ದೀಪ ಬೆಳಗಿಸಿ ವಸತೀ ಗೃಹ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಹೈಟ್ಸ್ ವಸತಿಗೃಹದ ಆಡಳಿತ ಪಾಲುದಾರ ಮಹೇಂದ್ರ ,ಅವರ ಪತ್ನಿ ವೀಣಾ, ಮಕ್ಕಳು ಹಾಜರಿದ್ದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಎನ್ ಎಸ್, ನಿಕಟ ಪೂರ್ವ ಉಪಾಧ್ಯಕ್ಷ ವೆಂಕಟೇಶ ಎಚ್ ಎಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ ನಕ್ರಾಜೆ , ಶ್ರೀದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಶ್ರೀದೇವಳದ ಮಾಜಿ ವ್ಯವಸ್ಥಾಪನಾ ಸದಸ್ಯ ಟ್ರಸ್ಟಿ ರವೀನಾಥ್ ಶೆಟ್ಟಿ ಕೇನ್ಯ , ದೇವಳದ ಇಂಜಿನಿಯರ್ ಉದಯಕುಮಾರ್, ಸೊಸೈಟಿ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ ರುದ್ರಪಾದ, ಪಟೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಮೆಸ್ಕಾಂ ಸಹಾಯಕ ಇಂಜಿನಿಯರ್
ಚಿದಾನಂದ, ಗ್ರಾ.ಪಂ ಹರೀಶ್ ಇಂಜಾಡಿ, ಗಿರೀಶ್ ಆಚಾರ್ಯ, ಭವ್ಯ , ಭಾರತಿ ದಿನೇಶ್,
ರೋಟರಿ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲ್, ಸದಸ್ಯ ದಿನೇಶ್ ಎಣ್ಣೆಮಜಲ್, ಮೋಹನ್ ದಾಸ್ ಎಣ್ಣೆಮಜಲ್, ಸುಬ್ರಹ್ಮಣ್ಯ ನೂಚಿಲ, ಯಶೋದ ಕೃಷ್ಣ, ಸಮ್ಮಿ ರಾಜ್ ರೈ ಕೇನ್ಯ, ಪುನೀತ್ ಎಣ್ಣೆ ಮಜಲು, ಅಚ್ಯುತನ್ ಬೆಂಗಳೂರು, ಜೂಜೇಂದ್ರ ಅತ್ತಿಹಳ್ಳಿ ಪ್ರಶಾಂತ್ ಸುಳ್ಯ, ಮಗಳು ಪ್ರಾರ್ಥನ್ಯ ಮತ್ತಿತರರು ಹಾಜರಿದ್ದರು.