ಸುಳ್ಯ ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿ ರಾಜಲಕ್ಷ್ಮಿ ಎಂ.ಎನ್. ರಿಗೆ ಪ್ರಭಾರ

0

ಸುಳ್ಯ ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿ ಶ್ರೀಮತಿ ರಾಜಲಕ್ಷ್ಮಿ ಎಂ.ಎನ್. ಪ್ರಭಾರ ವಹಿಸಿಕೊಂಡಿದ್ದಾರೆ.

ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿದ್ದ ಹರೀಶ್ ರವರು ಸುಳ್ಯ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರವರ ಕಾರ್ಯದರ್ಶಿಯಾಗಿ ಸರಕಾರದಿಂದ ನೇಮಕಗೊಂಡಿದ್ದು, ಮೇ.1 ರಿಂದ ಹರೀಶ್ ರವರು ಅಧಿಕಾರ ವಹಿಸಿಕೊಂಡಿದ್ದಾರೆ.

ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಭಾರವನ್ನು ರಾಜಲಕ್ಷ್ಮಿ ಯವರಿಗೆ ನೀಡಲಾಗಿದೆ.

2013ರಲ್ಲಿ ಪಿಡಿಒ ಆಗಿ ಸರಕಾರ ದಿಂದ ನೇಮಕಗೊಂಡ ರಾಜಲಕ್ಷ್ಮಿ ಯವರು ಕಾಣಿಯೂರು ಗ್ರಾ.ಪಂ. ನಲ್ಲಿ ಸೇವೆಗೆ ಸೇರಿದರು. 2021ರಲ್ಲಿ ದೇವಚಳ್ಳ ಗ್ರಾ.ಪಂ. ಪಿಡಿಒ ಆಗಿ ವರ್ಗಾವಣೆಗೊಂಡರು. 2014ರಿಂದ ಸುಳ್ಯ ತಾ.ಪಂ. ನಲ್ಲಿ ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಸುಳ್ಯ ಜಟ್ಟಿಪಳ್ಳ ನಿವಾಸಿ, ಎಂ.ಎನ್ಸ್ ಟೈಲರ್ ಗೋಕುಲ್ ದಾಸ್ ರವರ ಪತ್ನಿ.