ನರಸಿಂಹ ಜಯಂತಿ ಮಹೋತ್ಸವ

0

ಮೇ.13 (ಇಂದು) ಗಂಗಾ ಶಶಿಧರನ್ ರಿಂದ ವಯಲಿನ್ ವಾದನ

ಯಕ್ಷಗಾನ ಬಯಲಾಟ – “ಬನತ ಬಂಗಾರ್”

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಖ್ಯಾತ ವಯಲಿನ್ ವಾದಕಿ ಗಂಗಾ ಶಶಿಧರನ್ ಅವರಿಂದ ವಯಲಿನ್ ವಾದನ ನಡೆಯಲಿದೆ.

ಇಂದು ಬೆಳಗ್ಗೆ ಕುಮಾರಧಾರೆಯಲ್ಲಿ ಅವಭೃತೋತ್ಸವ, ವಸಂತಪೂಜೆ ನಡೆಯಿತು. ಸಂಜೆ ಗಂಟೆ 6.00ರಿಂದ ಖ್ಯಾತ ವಯಲಿನ್ ವಾದಕಿ ಗಂಗಾ ಶಶಿಧರನ್ ಅವರಿಂದ ವಯಲಿನ್ ವಾದನ ನಡೆದು ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ
ಯಕ್ಷಗಾನ ಬಯಲಾಟ – ಬನತ ಬಂಗಾರ್ (ತುಳು ಪ್ರಸಂಗ)
ಪ್ರದರ್ಶನ ನಡೆಯಲಿದೆ.