ಸಹೃದಯಿ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿ ಬಡ ಕುಟುಂಬ
ಅಡ್ಕಾರು ಕುಶಾಲಪ್ಪ ಗೌಡರ ಪುತ್ರ, ಜಾಲ್ಸೂರು ಗ್ರಾಮ ಪಂಚಾಯತ್ ಕಂಪ್ಯೂಟರ್ ಅಪರೇಟರ್ ದೇವಿಪ್ರಸಾದ್ ಅಡ್ಕಾರ್ (,38)ರವರ ಅರೋಗ್ಯದಲ್ಲಿ ಹಠಾತ್ತನೆ ಏರುಪೇರಾಗಿದ್ದು ಚಿಕಿತ್ಸೆ ವೈದ್ಯರ ಸಲಹೆಯಂತೆ ರೂ.10 ಲಕ್ಷ ಬೇಕಾಗಿದ್ದು, ಮನೆಯವರು ಸಹೃದಯಿ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.

ಆರೋಗ್ಯದಲ್ಲಿ ದಿಡೀರನೆ ಏರುಪೇರಾಗಿದ್ದ ಇವರನ್ನು ಕೆವಿಜಿ ಮಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ಬಳಿಕ ಮೆದುಳಿನಲ್ಲಿ ಗೆಡ್ಡೆಯ ಬೆಳವಣಿಗೆ ಕಂಡುಬ0ದಿದ್ದು, ವೈದ್ಯರ ಸಲಹೆಯಂತೆ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ತುರ್ತಾಗಿ 1೦ ಲಕ್ಷ ರೂ.ಅವಶ್ಯಕತೆ ಇರುತ್ತದೆ.
ಕೂಲಿ ಮತ್ತು ಸಣ್ಣ ಮಣ್ಣಿಗೆ ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿರುವ ದೇವಿಪ್ರಸಾದ್‌ರವರ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, 10 ಲಕ್ಷ ಹಣವನ್ನು ಹೊಂದಿಸುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಮನೆಯವರು ದೇವಿಪ್ರಸಾದ್ ರವರ ತುರ್ತು ಚಿಕಿತ್ಸೆಗೆ ಸಹೃದಯಿ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.








NAME : DEVIPRASAD A
A/C: 54059931951, IFSC: SBINOO40225










