ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಮೇ. 13ರಂದು ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.















ಸಮಿತಿಯ ವರದಿಯನ್ನು ಕಾರ್ಯದರ್ಶಿ ವಸಂತ ಪಡ್ಪು, ಲೆಕ್ಕಪತ್ರವನ್ನು ಕೋಶಾಧಿಕಾರಿ ತೀರ್ಥರಾಮ ಗೌಡ ಗುಡ್ಡೆಮನೆ ವಾಚಿಸಿದರು. ಬಳಿಕ 2025-26ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಚಂದ್ರಹಾಸ ಮಣಿಯಾಣಿ ಪಡ್ಪು, ಬಾಲಕೃಷ್ಣ ಪೂಜಾರಿ ಕಾರ್ಯದರ್ಶಿ ತಡಗಜೆ, ಕೋಶಾಧಿಕಾರಿಯಾಗಿ ತೀರ್ಥರಾಮ ಗೌಡ ಗುಡ್ಡೆಮನೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಮನೋಹರ ಪಿ.ಎಂ, ದಾಸನಮಜಲು, ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಪೂಜಾರಿ ಚೀಮುಳ್ಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಕುರುಂಬುಡೇಲು, ವಸಂತ ಉಲ್ಲಾಸ್, ಶಶಿಧರ ಮಣಿಯಾಣಿ ಬೀಡು,ವಸಂತ ಗೌಡ ಪಡ್ಪು, ಪದ್ಮನಾಭ ಚೂಂತಾರು, ವಿಜಯ್ ಕೂಡಣಕಟ್ಟೆ ಇವರುಗಳನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವಧ್ಯಕ್ಷ ಬಾಲಕೃಷ್ಣ ಪೂಜಾರಿ ಚೀಮುಳ್ಳು, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.










