ಮೇ.24 : ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನ ನೂತನ ಕಟ್ಟಡದ ಉದ್ಘಾಟನೆ

0

ಹಲವು ಮಂದಿ ಧಾರ್ಮಿಕ, ರಾಜಕೀಯ ಮುಖಂಡರುಗಳು ಭಾಗಿ

ಬೆಳ್ಳಾರೆಯ ಹೃದಯ ಭಾಗದಲ್ಲಿ ಇರುವ ಝಕರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯ ಪಬ್ಲಿಕ್ ಸ್ಕೂಲ್ ಇದರ ನೂತನ ಕಟ್ಟಡವು ಸಮಸ್ತ ಅಧ್ಯಕ್ಷರಾದ ಬಹು ಜಿಫ್ರಿ ಮುತ್ತುಕೋಯ ತಂಜಳ್ ರವರು ಮೇ.24 ರಂದು ಸಂಜೆ ಉದ್ಘಾಟಿಸಲಿದ್ದಾರೆ.


ದ.ಕ ಜಿಲ್ಲಾ ಖಾಝಿ ತ್ವಕಾ ಉಸ್ತಾದ್ ಉಡುಪಿ ಜಿಲ್ಲಾ ಖಾಝಿ ಮಾಣಿ ಉಸ್ತಾದ್, ದುಗ್ಗಲಡ್ಕ ತಂಞಳ್, ಅಲಿ ತಂಬಳ್ ಕುಂಬೂಲ್, ಮಾಡನ್ನೂರ್ ತಂಬಳ್ ರವರ ಗೌರವ ಉಪಸ್ಥಿತಿಯಲ್ಲಿ ವಿಧಾನ ಸಭಾಧ್ಯಕ್ಷರಾದ ಯು. ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವರಾದ ರಮಾನಾಥ ರೈ. ಲೋಕಸಭಾ ಸದಸ್ಯರಾದ ಕ್ಯಾ ಬ್ರಿಜೇಶ್ ಚೌಟ, ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ,ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ ಐವನ್ ಡಿಸೋಜ, ಅಶೋಕ್ ಕುಮಾರ್ ರೈ, ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಅಲಿ ಹುಸೈನಿ, ಡಾ| ಅಕ್ರಂ ಪಾಷ ವ್ಯಸ್ ಚೇರ್ಮನ್ ಪ್ಯೂಮನ್ ರೈಟ್ಸ್ ಮತ್ತು ಹಲವು ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಝಕರಿಯಾ ಜುಮಾ ಮಸೀದಿಗೆ ನೂತನ ಆಡಳಿತ ಸಮಿತಿಯು ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷದಲ್ಲಿಯೇ ಸುಮಾರು 9,000 ಸ್ಕ್ವೇರ್ ಫೀಟ್ ವಿಸ್ತೀರ್ಣದ ಮೂರು ಅಂತಸ್ತಿನ ಒಟ್ಟು 27,000 ಸೈರ್ ಫೀಟ್ ವಿಸ್ತೀರ್ಣದ ಬೃಹತ್ ಕಟ್ಟಡವು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಜನಾಬ್ ಯು. ಹೆಚ್. ಅಬೂಬಕ್ಕರ್ ಹಾಜಿ ಮತ್ತು ಮಸೀದಿ ಉಪಾಧ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಸಂಚಾಲಕರು ಆದ ಜನಾಬ್ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಯವರ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ, ಆಡಳಿತ ಸಮಿತಿ, ಶಾಲಾ ಆಡಳಿತ ಸಮಿತಿ, ಊರಿನ, ಹೊರ ಊರಿನ, ಅನಿವಾಸಿ ಧಾನಿಗಳ, ಜಮಾತಿನ ಸರ್ವ ಸಹಕಾರದೊಂದಿಗೆ ಕೇವಲ ಒಂದು ವರ್ಷದಲ್ಲಿ ಬೆಳ್ಳಾರೆಯ ಜನತೆಗೆ ಸಂತೋಷಗೊಳ್ಳುವಂತಹ ಸನ್ನಿವೇಶ ಸೃಷ್ಟಿಸಿದ್ದಾರೆ.


ಹಿದಾಯ ಪಬ್ಲಿಕ್ ಸ್ಕೂಲ್, ಅತ್ಯತ್ತುಮ ಬೋಧಕರಾದ ಸುಮಾರು 17 ಅಧ್ಯಾಪಕಿಯರು, ಮದ್ರಸಾ ಉಸ್ತಾದರು ಮತ್ತು ಮಕ್ಕಳ ಸೇವಕಿಯರು ಮಕ್ಕಳ ಅಭಿವೃದ್ಧಿ ಗಾಗಿ ಸದಾ ಸಿದ್ದರಾಗಿದ್ದಾರೆ ಎಂದು ಹೇಳಿದರು.


ಸಂಸ್ಥೆಯ ವಿಶೇಷತೆಗಳು
ಒಂದೇ ಕಡೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ, ವಿಶಾಲವಾದ ಆಟದ ಮೈದಾನ, ಸುಸಜ್ಜಿತ ಕಂಪ್ಯೂಟರ್ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ರೂಮ್, ವಾಚನಾಲಯ ( ಲೈಬ್ರರಿ), ವಿಜ್ಞಾನ ಪ್ರಯೋಗಲಯ, ಪಠ್ಯೇತರ ಚುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ವಿಶೇಷ ತರಬೇತಿ ಮತ್ತು ಪ್ರೋತ್ಸಾಹ, ಪ್ರತ್ಯೇಕ ಮದರಸಾ ತರಗತಿಗಳು, ಕರಾಟೆ ತರಗತಿಗಳು, ಶಾಲಾ ವಾಹನ ವ್ಯವಸ್ಥೆ, ಸಂಸ್ಥೆಯ ಪಕ್ಕದಲ್ಲೆ ಬಸ್ ನಿಲ್ದಾಣ (ಸರ್ಕಾರಿ ಬಸ್ ಗಳಲ್ಲಿ ಬರುವವರಿಗೆ). ಸೇರಿದಂತೆ ಎಲ್ಲಾ ವ್ಯವಸ್ಥೆ ಗಳನ್ನು ಹೊಂದಿರುತ್ತದೆ, LKGಯಿಂದ 8 ನೇ ತರಗತಿ ವರೆಗೆ ಕಳೆದ ವರ್ಷ ಸುಮಾರು 240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು, ಪ್ರಸ್ತುತ ವರ್ಷದಲ್ಲಿ 100 ರಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದು, ದಾಖಲಾತಿ ಮುಂದುವರಿಯುತ್ತಿದೆ ಎಂದು ಹಿದಾಯ ಪಬ್ಲಿಕ್ ಸ್ಕೂಲ್ ನ ಪ್ರಧಾನ ಕಾರ್ಯದರ್ಶಿ ಯು.ಪಿ.ಬಶೀರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


ಪತ್ರಿಕಾಗೋಷ್ಟಿಯಲ್ಲಿ ಬೆಳ್ಳಾರೆ ಝಕಾರಿಯ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಗೂ ಹಿದಾಯ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಬೂಬಕ್ಕರ್ ಯು.ಎಚ್, ಹಿದಾಯ ಪಬ್ಲಿಕ್ ಸ್ಕೂಲ್ ಸಂಚಾಲಕ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ,ಹಿದಾಯ ಸ್ಕೂಲ್ ಕೋಶಾಧಿಕಾರಿ ಝಕಾರಿಯ, ಝಕಾರಿಯ ಜುಮ್ಮಾ ಮಸೀದಿ ಕಾರ್ಯದರ್ಶಿ ಬಶೀರ್ ಕಲ್ಲಪಣೆ,ಜೊತೆ ಕಾರ್ಯದರ್ಶಿ ಅಜರುದ್ದೀನ್,ಪದಾಧಿಕಾರಿಗಳಾದ ಹಮೀದ್ ಹೆಚ್.ಎಂ.ಉಪಸ್ಥಿತರಿದ್ದರು.