ಪಂಜದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ

0

ಗೋಕರ್ಣ ಮಂಡಲಾಧೀಶ್ವರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಶ್ರೀಮುಖ ಪ್ರತಿಷ್ಠಾನ ಟ್ರಸ್ಟ್ ಪಂಜ (ಪಂಜ ಹವ್ಯಕ ವಲಯದ ಪ್ರಾಯೋಜಿತ) ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ ಇದರ ಸಹಕಾರದೊಂದಿಗೆ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ ಮೇ. ೨೦ ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ವಾಸ್ತು ತಜ್ಞ ಮಹಾಲಿಂಗೇಶ್ವರ ಕೃಷ್ಣಪ್ರಸಾದ ಮುನಿಯಂಗಳ , ಪಂಜ ಸದಾಶಿವ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿದ್ದರು.