ಸುಳ್ಯದ ಹಾನೆಸ್ಟಿ ಬಿಲ್ಡಿಂಗ್ ನಲ್ಲಿಶ್ರೀ ಭಗವತಿ ಎಂಟರ್ ಪ್ರೈಸಸ್ ಶುಭಾರಂಭ

0

ಸುಳ್ಯದ ಮುಖ್ಯ ರಸ್ತೆಯ ಹಾನೆಸ್ಟಿ ಬಿಲ್ಡಿಂಗ್ ನಲ್ಲಿ ಕರುಣಾಕರ, ವಿನೋದ್ ಮತ್ತು ಮಹಮ್ಮದ್ ಶಾಹಿ ಯವರ ಪಾಲುದಾರಿಕೆಯ ಶ್ರೀ ಭಗವತಿ ಎಂಟರ್ ಪ್ರೈಸಸ್ ಮೇ.28 ರಂದು ಶುಭಾರಂಭಗೊಂಡಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಧನ್ಯ ಫ್ಯಾನ್ಸಿ ಸ್ಟೋರ್ ಮಾಲಕ ಹರಿಶ್ಚಂದ್ರ, ಕೇಶವ ಮೊರಂಗಲ್ಲು, ಕೇಶವ ಸೀತಾಂಗೋಳಿ, ಮಾಲಿಂಗ,ದಿನೇಶ್, ಹರ್ಷಿತ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕರುಣಾಕರ ವಂದಿಸಿದರು.