ತಾಲೂಕು ಭಜನಾ ಪರಿಷತ್ ವಾರ್ಷಿಕ ಮಹಾಸಭೆ-ನೂತನ ಪದಾಧಿಕಾರಿಗಳು

0

ಅಧ್ಯಕ್ಷ -ಸೋಮಶೇಖರ ಪೈಕ, ಕಾರ್ಯದರ್ಶಿ- ಸತೀಶ್ ಟಿ.ಎನ್, ಖಜಾಂಜಿ- ನಾರಾಯಣ ಕೆ.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪ್ರವರ್ತಿತ ಸುಳ್ಯ ತಾಲೂಕು ಭಜನಾ ಪರಿಷತ್ ಇದರ ವಾರ್ಷಿಕ ಮಹಾಸಭೆಯು ಧ.ಗ್ರಾ.ಯೋಜನೆಯ ಯೋಜನಾ ಕಚೇರಿ ಸಭಾಭವನದಲ್ಲಿ ಮೇ.28 ರಂದು ನಡೆಯಿತು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಯೋಜನಾಧಿಕಾರಿ ಮಾಧವ ಗೌಡ, ಉಪಾಧ್ಯಕ್ಷ ಚಂದ್ರಶೇಖರ ತೋಟ, ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು , ಕಾರ್ಯದರ್ಶಿ ಸತೀಶ್ ಟ.ಎನ್, ಕೋಶಾಧಿಕಾರಿ ಮಹೇಶ್ ಮೇರ್ಕಜೆ,ಜತೆ ಕಾರ್ಯದರ್ಶಿ ಸಂಧ್ಯಾ ಮಂಡೆಕೋಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ಮುಂದಿನಅವಧಿಗೆನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಸೋಮಶೇಖರ ಪೈಕ, ಪ್ರಧಾನ ಕಾರ್ಯದರ್ಶಿ ಸತೀಶ್ ಟಿ.ಎನ್, ಕೋಶಾಧಿಕಾರಿ ನಾರಾಯಣ ಕಳಂಜ,
ಜತೆ ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ, ಉಪಾಧ್ಯಕ್ಷ ರಾಗಿ ನಾರಾಯಣ ಕೋಡ್ತುಗುಳಿ, ಸಂಧ್ಯಾ ಮಂಡೆಕೋಲು, ನಿರ್ದೇಶಕರಾಗಿ ಆನಂದ ಹಾಲೆಂಬಿ, ಚಂದ್ರಕಾಂತ ಬಳ್ಪ, ಶ್ರೀಮತಿ ರವಿಕಲಾ ಚಿಮ್ನೂರು ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ
ಕಳೆದ ಅವಧಿಯ
ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮುಂದಿನ ತಿಂಗಳಲ್ಲಿ ವಲಯವಾರು ಸಮಿತಿ ರಚಿಸುವುದಾಗಿ ತೀರ್ಮಾನಿಸಲಾಯಿತು. ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ವಲಯದಲ್ಲಿ ಹಮ್ಮಿಕೊಳ್ಳುವುದಾಗಿ ಪ್ರಸ್ತಾಪಿಸಲಾಯಿತು.
ಶ್ರೀಮತಿ ಕುಸುಮ ಬಾಳುಗೋಡು ಪ್ರಾರ್ಥಿಸಿ,ಯೋಜನಾಧಿಕಾರಿ ಮಾಧವ ರವರು ಪ್ರಾಸ್ತಾವಿಕಮಾತಿನೊಂದಿಗೆ ಪರಿಷತ್ತಿನ ಸಾಧನಾ ವರದಿ ಮಂಡಿಸಿದರು.


ಕಾರ್ಯದರ್ಶಿ ಸತೀಶ್ ಟಿ.ಎನ್ ವಾರ್ಷಿಕ ವರದಿ ವಾಚಿಸಿದರು.ಮೇಲ್ವಿಚಾರಕ ರಾಜೇಶ್ ಸ್ವಾಗತಿಸಿ, ಮೇಲ್ವಿಚಾರಕಿ ಶ್ರೀಮತಿ ಸವಿತಾಶೆಟ್ಟಿವಂದಿಸಿದರು.ಮೇಲ್ವಿಚಾರಕದಿನೇಶ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ವಲಯವಾರು ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಯೋಜನೆಯ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.