ದುರಸ್ತಿಯಾಗದ ನೀರಿನ ಪೈಪು ಲೈನ್ –

0

ಜಯನಗರದಲ್ಲಿ ನಾಲ್ಕು ದಿನಗಳಿಂದ ಕುಡಿಯಲು ನೀರಿಲ್ಲ…

ಸುಳ್ಯ ನಗರದ ಜಯನಗರ ವಾರ್ಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ನೀರು ಸರಬರಾಜಿಲ್ಲದೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.


ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಂಪೌಂಡು ಕುಸಿತಗೊಂಡು ನೀರಿನ ಪೈಪು ಲೈನ್ ಒಡೆದು ಹೋಗಿ ನೀರು ಸರಬರಾಜಿಗೆ ತೊಂದರೆಯಾಗಿತ್ತು. ನಾಲ್ಕು ದಿನಗಳು ಕಳೆದರೂ ಇಲ್ಲಿಯ ತನಕ ಪೈಪು ಲೈನ್ ದುರಸ್ತಿ ಕಾರ್ಯ ಮಾಡದೇ ನಿರ್ಲಕ್ಷ್ಯ ವಹಿಸಿರುವುದಾಗಿ ಸ್ಥಳೀಯ ಸಾರ್ವಜನಿಕರು ದೂರಿಕೊಂಡಿದ್ದಾರೆ. ಬಟ್ಟೆ ತೊಳೆಯಲು ಮತ್ತು ಸ್ನಾನ ಮಾಡಲು ಇದೀಗ ಮಳೆಯ ನೀರನ್ನು ಉಪಯೋಗಿಸುತ್ತಿದ್ದೇವೆ. ಕುಡಿಯುಲು ನೀರಿಲ್ಲದೆ ಸಮಸ್ಯೆ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.