ಹಾಲೆಮಜಲು ಸ. ಕಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಕೊಡಿಯಾಲಬೈಲು ಸೇವಾ ನಿವೃತ್ತಿ

0

ಹಾಲೆಮಜಲು ಕಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಕೊಡಿಯಾಲ ಬೈಲು ಮೇ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಇವರು ದುಗಲಡ್ಕ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಚಕ್ರಪಾಣಿ ವಾಗ್ಲೆ ಅವರ ಪತ್ನಿ.
ಕೊಡಿಯಾಲ ಬೈಲು ನಿವಾಸಿ.

ಜಯಂತಿ ಮೂಲತಃ ಕಾರ್ಕಳದವರಾದ ಇವರು ದಿl ರಾಮಣ್ಣ ಪ್ರಭು ಮತ್ತು ದಿl ಗೌರಮ್ಮ ದಂಪತಿಗಳ ಪುತ್ರಿ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಅಲ್ಲೇ ಪಡೆದಿರುತ್ತಾರೆ. ಕುಮುದಾ ಉಮಾ ಶಂಕರ ಶಿಕ್ಷಕ ತರಬೇತಿ ಸಂಸ್ಥೆ ಕೊಕ್ಕರ್ಣೆ ಇಲ್ಲಿ ಟಿ.ಸಿ.ಎಚ್ ಮಾಡಿದ್ದಾರೆ.. 1996 ರಲ್ಲಿ ಕೊಂಕಣಾರ ಬೆಟ್ಟು ಸ. ಹಿ.ಪ್ರಾ ಶಾಲೆಗೆ ಕರ್ತವ್ಯಕ್ಕೆ ಸೇರಿದ ಅವರು ಅಲ್ಲಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿ, ಬಳಿಕ ಕೊಯಿಕುಳಿ ಸ.ಹಿ.ಪ್ರಾ ಶಾಲೆಯಲ್ಲಿ 4 ವರ್ಷಗಳ ಕಾಲ, ಜಯನಗರ ಸ. ಹಿ.ಪ್ರಾ.ಶಾಲೆಯಲ್ಲಿ 13 ವರ್ಷಗಳ ಕಾಲ, ಬಳಿಕ ಮತ್ತೆ ಕೊಯಿಕುಳಿಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಹಾಲೆಮಜಲು ಸ.ಕಿ.ಪ್ರಾ.ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಸಲ್ಲಿಸಿದ್ದಾರೆ. 30 ವರ್ಷಗಳ ಸುಧೀರ್ಘ ಸೇವೆ ಸಲ್ಲಿ ಸೇವಾ ನಿವೃತ್ತಿ ಹೊಂದುತಿದ್ದಾರೆ. ಇವರ ಪುತ್ರಿಯರಾದ ಶ್ರೀಮತಿ ಪವಿತ್ರ ಕೆ.ಸಿ , ಟಿ.ಎಂ.ಎ ಪೈ Manipal Institute of Technology MAHE, Manipal ಇದರಲ್ಲಿ Department of Information and Communication Technology ಇದರಲ್ಲಿ .ಪಿ.ಎಚ್. ಡಿ ಮಾಡುತಿದ್ದಾರೆ. ಅಳಿಯ ಪ್ರಶಾಂತ್ ಅವರು ಮೆಲೊಡಿ ಶಿಪ್ ಮ್ಯಾನೆಜ್‌ಮೆಂಟ್‌ ಲಿ. ನಲ್ಲಿ ಚೀಪ್ ಇಂಜಿನಿಯರ್ ಆಗಿದ್ದಾರೆ.
ಇನ್ನೋರ್ವ ಪುತ್ರಿ ಶ್ರೀಮತಿ ಪ್ರೀತಿ ಕೆ.ಸಿ , ಉಡುಪಿಯಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಅಳಿಯ ಯಶವಂತ ಎನ್ ಪ್ರಭು ಮೆಸ್ಕಾಂ ನಲ್ಲಿ ಎ.ಇ.ಇ ಆಗಿದ್ದಾರೆ. ಪುತ್ರ ಕೃಷ್ಣಪ್ರಸಾದ್ ಎ.ಕೆ ಕನ್ಸ್ ಸ್ಟ್ರಕ್ಷನ್, (ಸಿವಿಲ್ ಇಂಜಿನಿಯರ್ ಮತ್ತು ಕನ್ಸ್ ಸ್ಟ್ರಕ್ಷನ್ಸ್) ಎಂಬ ಸ್ವಂತ ಉದ್ದಿಮೆ ನಡೆಸುತಿದ್ದಾರೆ . ಸೊಸೆ ಅಕ್ಷತಾ ಬಿ.ಎಂ.ಎಲ್.ಟಿ ಓದುತಿದ್ದಾರೆ.