ಸಹ ಶಿಕ್ಷಕಿ ಶ್ರೀಮತಿ ಶಾಂತಿ ಕುಮಾರಿ ನಡುತೋಟ ನಿವೃತ್ತಿ

0

ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶಾಂತಿ ಕುಮಾರಿ ನಡುತೋಟ ಮೇ.31 ರಂದು ನಿವೃತ್ತಿ ಹೊಂದಲಿದ್ದಾರೆ.

ಸುಬ್ರಹ್ಮಣ್ಯದ ಕಾಶಿ ಕಟ್ಟೆ ನಿವಾಸಿಯಾಗಿರುವ ಇವರು ನಿವೃತ್ತ ಉಪನ್ಯಾಸಕರಾದ ನೀಲಪ್ಪ ಗೌಡ ನಡುತೋಟ ಅವರ ಪತ್ನಿ.

ಮೂಲತಃ ಮಡಿಕೇರಿಯವರಾದ ಶಾಂತಿಕುಮಾರಿ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಡಿಕೇರಿಯಲ್ಲಿ ಪಡೆದು ಟಿ.ಸಿ.ಎಚ್ ಮಾಡಿರುತ್ತಾರೆ. 1998 ರಲ್ಲಿ ಏನೆಕಲ್ಲು ಹಿ.ಪ್ರಾ ಶಾಲೆಗೆ ಶಿಕ್ಷಕರಾಗಿ ಸೇರ್ಪಡೆಗೊಂಡ ಅವರು 2009 ರ ವರೆಗೆ ಅಲ್ಲಿ ಕರ್ತವ್ಯ ನಿರ್ವಹಿಸಿದರು. ಬಳಿಕ ಸುಬ್ರಹ್ಮಣ್ಯ ಮಾದರಿ ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯವನ್ನು ಮುಂದುವರಿಸಿದ್ದಾರೆ. ಒಟ್ಟು ಸುಧೀರ್ಘ 28 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಗೈಡ್ಸ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಇವರ ಪುತ್ರಿ ಶ್ರೀಮತಿ ವಿದ್ಯಾಶ್ರೀ ಗಣೇಶ್ ಎಂ.ಎಸ್ಸಿ ಪದವೀಧರೆ ಬೆಂಗಳೂರಿನಲ್ಲಿ ಇಂಜಿನಿಯರ್ ಕಾಲೇಜಿನಲ್ಲಿ ಲೆಕ್ಚರ್ ಆಗಿದ್ದಾರೆ. ಅಳಿಯ ಗಣೇಶ್ ಇಂಜಿನಿಯರ್ ಆಗಿದ್ದಾರೆ. ಮತ್ತೊರ್ವ ಪುತ್ರಿ ಶ್ರೀಮತಿ ದಿವ್ಯಶ್ರೀ ಕೀರ್ತಿರಾಜ್ ಮೈಸೂರಿನಲ್ಲಿ ನೆಲೆಸಿದ್ದು ಅಳಿಯ ಕೀರ್ತಿರಾಜ್ ಮೈಸೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ.