ಸಾರ್ವಜನಿಕರಿಗೆ ಪಂಚಾಯತಿನಿಂದ ಶವ ದಹನ ಪೆಟ್ಟಿಗೆಯ ವ್ಯವಸ್ಥೆ
ಅಮರಮುಡ್ನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ಮೇ.30 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.








ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಮಾಹಿತಿ ನೀಡುವ ಬಗ್ಗೆ ಸೂಚಿಸಲಾಯಿತು.
15 ನೇ ಹಣಕಾಸು ಯೋಜನೆಯ ಸ್ವಂತ ನಿಧಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಶವ ದಹನ ಪೆಟ್ಟಿಗೆ ಖರೀದಿಸಲಾಗಿದ್ದು ನಿಗದಿತ ಶುಲ್ಕ
ಪಾವತಿಸಿ ಇದರ ಸದುಪಯೋಗವನ್ನು ಪಡಕೊಳ್ಳುವಂತೆ ಪಿ.ಡಿ.ಒ ರವರು ತಿಳಿಸಿದರು.
2024-25 ನೇ ಸಾಲಿನ ಗ್ರಾಮ ಸಭೆಯಲ್ಲಿ ನಿರ್ಣಯವಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
15 ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ತಯಾರಿಸಲಾಯಿತು.
ಪ.ಜಾತಿ ಮತ್ತು ಪ.ಪಂಗಡ ಸ್ವಂತ ನಿಧಿಯಿಂದ ಅರ್ಹ ಫಲಾನುಭವಿಗಳಿಗೆ ಕುಡಿಯುವ ನೀರಿನ ಟ್ಯಾಂಕನ್ನು ಉಚಿತವಾಗಿ ವಿತರಿಸಲಾಯಿತು. ಪಂಚಾಯತ್ ಸಿಬ್ಬಂದಿ ಗಳಿಗೆ ವೇತನ ಪರಿಷ್ಕರಣೆ ಮಾಡುವಂತೆ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಗ್ರಾಮದ ಶಾಲೆಗಳ ಅಡುಗೆ ಸಿಬ್ಬಂದಿ ಆಯ್ಕೆಯ ಕುರಿತು ಸಮಾಲೋಚನೆ ನಡೆಸಲಾಯಿತು. ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಕೃಷ್ಣಪ್ರಸಾದ್ ಮಾಡಬಾಕಿಲು, ವೆಂಕಟ್ರಮಣ ಇಟ್ಟಿಗುಂಡಿ, ದಿವ್ಯಾ ಎಂ, ಪದ್ಮಪ್ರಿಯಾ ಮೇಲ್ತೋಟ, ಹೂವಪ್ಪ ಗೌಡ ಆರ್ನೋಜಿ, ತೇಜಾವತಿ ಎಮ್, ಜನಾರ್ದನ ಪಿ, ರಾಧಾಕೃಷ್ಣ ಕೆ, ಸೀತಾ ಹೆಚ್, ಮೀನಾಕ್ಷಿ ಚೂಂತಾರು ಉಪಸ್ಥಿತರಿದ್ದರು. ಪಿ.ಡಿ.ಒ ದಯಾನಂದ ಪತ್ತುಕುಂಜ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.










