ದ.ಕ. ಜಿಲ್ಲಾ ನಿರೂಪಣಾಧಿಕಾರಿಯಾಗಿ ರಶ್ಮಿ ಕೆ.ಎಂ. ನಿಯುಕ್ತಿ

0

ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರಶ್ಮಿ ಕೆ.ಎಂ ರವರು ದ.ಕ. ಜಿಲ್ಲಾ ನಿರೂಪಣಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.
ಇವರು ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆಯವ ಪತ್ನಿ. ಇವರ ಪುತ್ರಿ ಕು. ಸೃಷ್ಟಿ ಎನ್.ಎ. ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಪುತ್ರ ಸೃಜನ್ ಗೌಡ ಎನ್.ಎ ಗುತ್ತಿಗಾರು ಸ.ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿ. ಶ್ರೀಮತಿ ರಶ್ಮಿಯವರು ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಗುತ್ತಿಗಾರಿನಲ್ಲಿ ಮತ್ತು ಪದವಿ ವಿದ್ಯಾಭ್ಯಾಸವನ್ನು ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಹಾಗೂ ಎಂ.ಎಸ್.ಡಬ್ಲು ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿ ಎಂ.ಎಸ್. ಪದವಿಯನ್ನು ಶಿವಮೊಗ್ಗದ ಮಾನಸ ವಿದ್ಯಾಸಂಸ್ಥೆಯಲ್ಲಿ ಮಾಡಿರುತ್ತಾರೆ.