ಬೆಳ್ಳಾರೆ ಗ್ರಾಮ ಪಂಚಾಯತ್ ಲಕ್ಷ್ಮೀ ಸಂಜೀವಿನಿ ಒಕ್ಕೂಟ ವತಿಯಿಂದ ಮುಟ್ಟಿನ ನೈರ್ಮಲ್ಯ ದಿನ ಕಾರ್ಯಕ್ರಮ ಸಂಜೀವಿನಿ ಕಟ್ಟಡ ಗ್ರಾಮ ಪಂಚಾಯತ್ ಬೆಳ್ಳಾರೆ ಇಲ್ಲಿ ಮೇ.29 ರಂದು ನಡೆಯಿತು.
















ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ, ಗ್ರಾಮ ಪಂಚಾಯತ್ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಮಮತಾ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ, CHO ಶ್ರೀಮತಿ ವಸಂತಿ, ಎನ್ ಆರ್ ಎಲ್ ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತ, ಶ್ರೀಮತಿ ರೂಪ ವಲಯ ಮೇಲ್ವಿಚಾರಕರು ಕೌಶಲ್ಯ ,ಶ್ರೀಮತಿ ಜಯಲಕ್ಷ್ಮೀ ಬಿಆರ್.ಪಿ, ಪಿ.ಆರ್.ಐ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ನಿಶ್ಮಿತಾ ಸ್ವಾಗತಿಸಿದರು.

FNHW,GENDER ಮೂಲಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ ಇಲ್ಲಿಯ ಕಿಶೋರಿಯರಿಗೆ ,ಮತ್ತು ಒಕ್ಕೂಟದಲ್ಲಿನ ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಸಂಘದ ಸದಸ್ಯರಿಗೆ ಬೆಳ್ಳಾರೆಯ ಸಿ.ಎಚ್.ಒ ಶ್ರೀಮತಿ ವಸಂತಿ ಇವರು ಮುಟ್ಟಿನ ನೈರ್ಮಲ್ಯ ದಿನ ಆಚರಣೆ, ಅಂಗವಾಗಿ ಹದಿಹರೆಯದ ಸಮಸ್ಯೆಗಳು,ಮಾನಸಿಕ ಮತ್ತು ದೈಹಿಕ ಬದಲಾವಣೆ, ವೈಯಕ್ತಿಕ ಶುಚಿತ್ವ,ಸ್ಯಾನಿಟರಿ ನ್ಯಾಪ್ಕಿನ್,ಉಪಯೋಗಿಸುವ ಕುರಿತು,ಮುಟ್ಟಿನ ಕಪ್ ಬಗ್ಗೆ,ಪೌಷ್ಟಿಕತೆ ಆಹಾರ,ಕಿಶೋರಿಯರ ಮುಟ್ಟಿನ ಸಮಯದಲ್ಲಿ ಆರೋಗ್ಯ ಏರುಪೇರು ಇದ್ದಲ್ಲಿ ವೈದ್ಯರ ಸಂಪರ್ಕಿಸುವಂತೆ ಸಲಹೆ, ಮಾರ್ಗದರ್ಶನ ನೀಡಿದರು.ಶ್ರೀಮತಿ ಶ್ವೇತ ಅವರು ಘನ ತ್ಯಾಜ್ಯ,ಲಿಂಗತ್ವ ವೇದಿಕೆಯ ಪ್ರಯೋಜನಗಳು ಮುಟ್ಟಿನ ಜಾಗೃತಿ ಬಗ್ಗೆ ಮಕ್ಕಳಿಗೆ ಮಣಿ ಪೋಣಿಸುವುದು , Lokos ಸೇರ್ಪಡೆ , ನಲ್ ಜಲ್ ಮಿತ್ರ ಆಯ್ಕೆ ಕುರಿತು ಮಾಹಿತಿ ನೀಡಿದರು.
ಘನ ತ್ಯಾಜ್ಯ ವಾಹನ ಚಾಲಕಿ ಶ್ರೀಮತಿ ನಿಶ್ಮಿತಾ ಇವರು ಕಸ ವಿಂಗಡಣೆಯಲ್ಲಿ ಹಸಿ ಕಸ,ಒಣ ಕಸ,ಅಪಾಯಕಾರಿ ಕಸ ಕುರಿತು ,ಘನ ತ್ಯಾಜ್ಯ ಸಂಜೀವಿನಿ ನಿರ್ವಹಣೆ ಕುರಿತು,ಮಾಹಿತಿ ನೀಡಿದರು. ಎಲ್.ಸಿ.ಆರ್.ಪಿ ಶಕೀಲಾ ಅವರು ಲಿಂಗತ್ವ ಪ್ರತಿಜ್ಞೆ ಭೋಧನೆ ಮಾಡಿಸಿದರು.ಎಲ್.ಸಿ.ಆರ್.ಪಿ ದಿವ್ಯಲತಾ ವಂದಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಎಂಬಿಕೆ,ಎಲ್.ಸಿ.ಆರ್ ಪಿಗಳು,ಒಕ್ಕೂಟದ ಪದಾಧಿಕಾರಿಗಳು,ಒಕ್ಕೂಟದ ಸದಸ್ಯರು,ಸಖಿಗಳು,ಶಾಲಾ ಮಕ್ಕಳು ಹಾಜರಿದ್ದರು.










