ಆಪರೇಷನ್ ಸಿಂದೂರದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಅಕ್ಷಯ ಕಲಾಮಂದಿರದಲ್ಲಿ ಜೂ. 7 ರಂದು ಬೆಳಿಗ್ಗೆ 10 ಗಂಟೆಗೆ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.















ಮುಖ್ಯ ಅಭ್ಯಾಗತರಾಗಿ ಲಿಫ್ಟೆನಂಟ್ ಕಮಾಂಡರ್ ಶ್ರೀಕಾಂತ್ ಡಿ.ಕೆ., ನಿವೃತ್ತ ಯೋಧ ದೇರಣ್ಣ ಗೌಡ ಅಡ್ಡಂತ್ತಡ್ಕ, ಜಗದೀಶ್ ಕೆ ಪಿ. ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಧ್ಯಾಹ್ನ ಮಹಾಪೂಜೆಯ ಸಂದರ್ಭದಲ್ಲಿ ವಿಶೇಷ ಸೇವೆ ನಡೆಯಲಿದೆ ಎಂದು ಆಯೋಜನಾ ಸಮಿತಿ ತಿಳಿಸಿದೆ.










