
ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇದರ ಮುಂಗಾರು ಹಂಗಾಮ ಎಂಬ ಮಳೆಗಾಲದ ಠೇವಣಿ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ಬಿಡುಗಡೆಯ ಕರಪತ್ರ ಬಿಡುಗಡೆಯು ವಿಟ್ಲ ಶಾಖೆಯಲ್ಲಿ ಜೂ.03 ರಂದು ನಡೆಯಿತು.








1 ವರ್ಷದ ನಿರಖು ಠೇವಣಿಗೆ 10 % ಹಾಗೂ ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂ ಗೆ 7777/- ₹ 100/- ಕ್ಕೆ ಬಡ್ಡಿದರ 85 ಪೈಸೆ ಮಾತ್ರ, ಗರಿಷ್ಠ ಸಾಲ – ಕನಿಷ್ಠ ಬಡ್ಡಿ ದರ
ಉದ್ದೇಶದ ಕರಪತ್ರದ ಬಿಡುಗಡೆ ಸಮಾರಂಭವು ನಡೆಯಿತು , ಈ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಭೂ ಮೌಲ್ಯಮಾಪಕರಾದ ಶ್ರೀ ರಾಮ ಮೂಲ್ಯ ವೀರಕಂಭ ರವರು ಕರಪತ್ರವನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಹಕರಾದ ಸಂಜೀವ ಪೂಜಾರಿ, ವಸಂತ ಮೂಲ್ಯ ಎರುoಬು, ಶಿವರಾಮ ಕುಲಾಲ್ ವಿಟ್ಲ, ಗ್ರೇಗೂರಿ ಲೂಯಿಸ್ ವಿಟ್ಲ, ಸಹಕಾರ ಸಂಘದ ಸರಾಫರಾದ ಲಕ್ಷ್ಮಣ ಆಚಾರ್ಯ ಉಪಸ್ಥಿತರಿದ್ದರು.ವಿಟ್ಲ ಶಾಖೆಯ ವ್ಯವಸ್ಥಾಪಕಾರದ ಗಣೇಶ್ ಕುಮಾರ್ ಹಾಗೂ ಶ್ರೀಮತಿ ಹರಿಣಿ ಸಹಕರಿಸಿದರು .










