









ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಆಚರಣೆ ಕಾರ್ಯಕ್ರಮವು ಜೇಸಿ ಐ ಪಂಜ ಪಂಚಶ್ರೀ ಮತ್ತು ಸಾನಿಕ ನರ್ಸರಿ ಚೀಮುಳ್ಳು ಪಂಜ ಇದರ ಆಶ್ರಯದಲ್ಲಿ ಪಾಂಡಿಗದ್ದೆ ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೇಸಿ HGF ವಾಚಣ್ಣ ಕೆರೆಮೂಲೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ದಯಾನಂದ ಕಂಬಳ , ಮುಖ್ಯೋಪಾಧ್ಯಾಯ ಯಶೋಧರ ಕಳಂಜ , ವಲಯಾಧಿಕಾರಿಯಾದ JFM ಲೋಕೇಶ್ ಆಕ್ರಿಕಟ್ಟೆ,ಕಾರ್ಯದರ್ಶಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಅಶೋಕ್ ಕುಮಾರ್ ದಿಡುಪೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಸದಸ್ಯರು, ಸಹಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಜೇಸಿ ಅಶೋಕ್ ಕುಮಾರ್ ದಿಡುಪೆ ವೇದಿಕೆಗೆ ಆಹ್ವಾನಿಸಿ ಕಾರ್ಯದರ್ಶಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.








